ಮೈಸೂರು

ಶಾದನಹಳ್ಳಿ ಅಪಾಯಕಾರಿ ಪ್ರದೇಶ ನಿರ್ಬಂಧ

ಮೈಸೂರಿನ  ಶಾದನಹಳ್ಳಿಯ ಆರ್ ಬಿ ಐ ಹಿಂಬಾಗದ ಭೂಮಿಯಲ್ಲಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಬಾಲಕ ಮೃತಪಟ್ಟ ತಕ್ಷಣ ಅಧಿಕಾರಿಗಳು ಎಚ್ಚೆತ್ತಿದ್ದು ಆ ಸ್ಥಳದಲ್ಲಿ ಫಲಕವನ್ನು ಅಳವಡಿಸಿದ್ದಾರೆ.

ಅಪಾಯಕಾರಿ ಪ್ರದೇಶ ಸಾರ್ವಜನಿಕರಿಗೆ ಪ್ರವೇಶವಿಲ್ಲ. ತಹಶೀಲ್ದಾರ್ ಮೈಸೂರು ತಾಲೂಕು ಎಂದು ಫಲಕದಲ್ಲಿ ನಮೂದಿಸಲಾಗಿದೆ. ಶಾದಹಳ್ಳಿಯಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳದ ಕುರಿತು ಕೈಗಾರಿಕೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ರವಿಕುಮಾರ್ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಈ ಸ್ಥಳದ ಆಳದಲ್ಲಿ ಇದ್ದಿಲು ಪತ್ತೆಯಾಗಿದ್ದು, ಮೇಲ್ಭಾಗದಲ್ಲಿ ಮರಳು ಸುರಿಯಲಾಗಿದೆ ಎನ್ನಲಾಗುತ್ತಿದೆ.  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಸಲಹಾ ಸಮಿತಿಯ ತಂಡದ ವರದಿ ಗುರುವಾರ ಕೈ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: