ಕರ್ನಾಟಕಪ್ರಮುಖ ಸುದ್ದಿ

ರಾಯಚೂರು: ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು ಶವವಾಗಿ ಪತ್ತೆ

ರಾಯಚೂರು,ಮಾ.8-ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು ಸೋಮವಾರ ಬೆಳಿಗ್ಗೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವರುಣ್ (9) ಹಾಗೂ ಸಣ್ಣಯ್ಯ (5) ಮೃತಪಟ್ಟ ಮಕ್ಕಳು. ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳು ನಿನ್ನೆ ಮಧ್ಯಾಹ್ನ ಆಟವಾಡಲು ಹೋದಾಗ ನಾಪತ್ತೆಯಾಗಿದ್ದರು.

ನಿನ್ನೆಯಿಂದ ಸಿರವಾರ ಹಾಗೂ ಕವಿತಾಳ ಪೋಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ನಿನ್ನೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಸಹ ಶೋಧ ಕಾರ್ಯ ಮುಂದುವರಿಸಿದಾಗ ಬಾಲಕರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸಿರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)

Leave a Reply

comments

Related Articles

error: