ಮೈಸೂರು

ಅಂತರ್ಜಾಲದಿಂದ ಬಹಳಷ್ಟು ಜನರು ಹಲವಾರು ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ : ಮಾಥ್ಯೂ ಥಾಮಸ್

ಮೈಸೂರು, ಮಾ . 8 :- ಅಂತರ್ಜಾಲದಿಂದ ಬಹಳಷ್ಟು ಜನರು ಇಂದು ಹಲವಾರು ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ ಎಂದು ಡಿ.ವೈ.ಎಸ್ಪಿ. ಮಾಥ್ಯೂ ಥಾಮಸ್ ಅವರು ಅಭಿಪ್ರಾಯಪಟ್ಟರು.
ಮೈಸೂರು ತರಬೇತಿ ಸಂಸ್ಥೆ, ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣೆ ಕೇಂದ್ರ, ಹಾಗೂ ಬೆಂಗಳೂರಿನ ಇ-ಆಡಳಿತ ಕೇಂದ್ರ ಮತ್ತು ಎನ್.ಇ.ಜಿ.ಡಿ ಸಾಮಥ್ರ್ಯ ಸಂಘಟನೆ ಯೋಜನೆಯ ಸಹಯೋಗದಲ್ಲಿ ಇಂದು ನಡೆದ “ಸೈಬರ್ ಸ್ಯೆಕ್ಯೂರಿಟಿ” ಮತ್ತು “ಇ-ಆಡಳಿತ” ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೈಬರ್ ಅಪರಾಧದ ಬಗ್ಗೆ ಜ್ಞಾನವಿಲ್ಲದ ಸಾರ್ವಜನಿಕರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದರು.

ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಯಿಂದ ಆನ್‍ಲೈನ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್‍ಗಳನ್ನು ಕಲಿತುಕೊಂಡು ಸರ್ಕಾರದ ಕೆಲಸ ಕಾರ್ಯಗಳನ್ನು ಸುಗಮಗೊಳಿಸಿ ಎಂದರು.
ಕಾರ್ಯಕ್ರಮದಲ್ಲಿ ಸೈಬರ್ ಸೆಕ್ಯುರಿಟಿ ತಜ್ಞರಾದ ಅನಂತ ಪ್ರಭು, ಮೈಸೂರು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಕ.ವಿ.ಶಿವರಾಮಯ್ಯ, ಬೋಧಕ ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: