ಮೈಸೂರು

ಬದುಕನ್ನು ಸವಾಲಾಗಿ ಸ್ವೀಕರಿಸಬೇಕು : ಕೆ.ಟಿ.ಶ್ರೀಕಂಠೇಗೌಡ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿತ್ವವನ್ನು ಸಮರ್ಪಕವಾಗಿ ಕಟ್ಟಿಕೊಳ್ಳಲು ಶಿಕ್ಷಣ ಬಹುಮುಖ್ಯ. ವ್ಯಕ್ತಿತ್ವ ಗಟ್ಟಿಯಾದರೆ ಭವಿಷ್ಯ, ಬದುಕು ಗಟ್ಟಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.

ಗುರುವಾರ ಮೈಸೂರಿನ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಬನುಮೋತ್ಸವದ ಸಮಾರೋಪ, ಅಂತರ ಕಾಲೇಜು ಭಾವಗೀತೆ ಮತ್ತು ಜಾನಪದ ಗೀತೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಸವಾಲಿನ ಜಗತ್ತು ನಮ್ಮ ಮುಂದಿದೆ. ಎಲ್ಲಾ  ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಸವಾಲುಗಳನ್ನು ಸ್ವೀಕರಿಸಬೇಕಾದರೆ ಎದೆಗಾರಿಕೆ ಬೇಕು. ಬದುಕನ್ನು ಸವಾಲಾಗಿ ಸ್ವೀಕರಿಸಿದರೆ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.

ಭಾವಗೀತೆ ಸ್ಪರ್ಧೆಯಲ್ಲಿ ಎಸ್‍ಡಿಎಂ ಕಾಲೇಜಿನ ಹಂಸಿನಿ ಪ್ರಥಮ, ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪಣಿಸಿಂಹ ದ್ವಿತೀಯ, ಎಸ್‍ಡಿಎಂ ಕಾಲೇಜಿನ ಪೂಜಾ ಸುಗಮ್ ತೃತೀಯ ಬಹುಮಾನ ಪಡೆದುಕೊಂಡರು.ಜಾನಪದ ಗೀತೆ ಸ್ಪರ್ಧೆಯಲ್ಲಿ ಮಂಡ್ಯದ ಎನ್.ಎಸ್ ಸ್ವಾಯತ್ತ ಸರ್ಕಾರಿ ಮಹಾವಿದ್ಯಾಲಯದ ಮಂಜೇಶ್ ಗೌಡ ಪ್ರಥಮ, ಮಂಡ್ಯ ಟಿಇಎಸ್ ಕಾಲೇಜಿನ ಶರತ್  ದ್ವೀತಿಯ, ಶಾಲಿನಿ ತೃತೀಯ ಬಹುಮಾನ ಹಾಗೂ ಮಂಡ್ಯ ಟಿಇಎಸ್ ಕಾಲೇಜು ಪರ್ಯಾಯ ಪಾರಿತೋಷಕ ಬಹುಮಾನ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಬಿ.ಜಯದೇವ, ಆಡಳಿತಾಧಿಕಾರಿ ಡಾ.ಎನ್.ತಿಮ್ಮಯ್ಯ, ಗೌರವ ಕಾರ್ಯದರ್ಶಿ ಎಸ್.ಜೆ.ಲಕ್ಷ್ಮೇಗೌಡ, ಸಾಹಿತ್ಯ ಮತ್ತು ಸಾಂಸ್ಕೃತಿಕ  ಸಮಿತಿಯ ಸಂಚಾಲಕ ಪ್ರೊ.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: