ಕರ್ನಾಟಕಪ್ರಮುಖ ಸುದ್ದಿಮನರಂಜನೆ

ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿ ಜೊತೆ ಗ್ರಾಮಸ್ಥರ ಗಲಾಟೆ : ಹಾಸನದಲ್ಲಿ ಘಟನೆ

ರಾಜ್ಯ(ಹಾಸನ)ಮಾ.9:-  ಚಂದನವನದ ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿ ಜೊತೆ ಗ್ರಾಮಸ್ಥರು ಗಲಾಟೆ ನಡೆಸಿದ ಘಟನೆ ಹಾಸನ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಯಶ್ ತಂದೆ ಅರುಣ್ ಕುಮಾರ್‌ ಹಾಗೂ ತಾಯಿ ಪುಷ್ಪ ಜೆಸಿಬಿಯೊಂದಿಗೆ ಜಮೀನಿನ ಬಳಿ ತೆರಳಿದ್ದರು. ಓಡಾಡುವ ಕಾಲುದಾರಿ ಜಾಗಕ್ಕಾಗಿ ಗ್ರಾಮಸ್ಥರೊಂದಿಗೆ ವಾಗ್ವಾದ ನಡೆದಿದ್ದು, ಕೆಲಸ ಮಾಡದಂತೆ  ಗ್ರಾಮಸ್ಥರು ಅಡ್ಡಿಪಡಿಸಿದರು. ಮಾತಿಗೆ ಮಾತು ಬೆಳೆದು   ಗ್ರಾಮಸ್ಥರು   ಹಾಗೂ ಯಶ್ ಬೆಂಬಲಿಗರು ಕೈ ಕೈ ಮಿಲಾಯಿಸಿದರು. ಸ್ಥಳಕ್ಕೆ ದುದ್ದ ಪೊಲೀಸರು ಭೇಟಿ ನೀಡಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದ   ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ.  ದುದ್ದ ಹೋಬಳಿ ತಿಮ್ಮೇನಹಳ್ಳಿ ಗ್ರಾಮದ ಬಳಿ‌ ರಾಕಿಂಗ್ ಸ್ಟಾರ್ ಯಶ್  ಜಮೀನು ಖರೀದಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: