ಮೈಸೂರು

ಮಾ.16 : ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಹಾರಥೋತ್ಸವ ಹಾಗೂ ಅನ್ನ ಸಂತರ್ಪಣೆ

ಮೈಸೂರು,ಮಾ.9:- ಮೈಸೂರು ನಗರದ ಪ್ರತಿಷ್ಠಿತ ಹೆಬ್ಬಾಳು ಬಡಾವಣೆಯ 1ನೇ ಹಂತದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಹಾರಥೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ಮಾ.16ರಂದು ನಡೆಯಲಿದೆ ಎಂದು ಶ್ರೀ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೆ.ಟಿ.ಚಲುವೇಗೌಡ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ 12ಗಂಟೆಗೆ ಶಾಸಕ ಎಲ್.ನಾಗೇಂದ್ರ ಹಾಗೂ  ಹಾಲಿ ಮತ್ತು ಮಾಜಿ ನಗರಪಾಲಿಕೆ ಸದಸ್ಯರುಗಳ ನೇತೃತ್ವದಲ್ಲಿ ನೆರವೇರಲಿದ್ದು ಪ್ರತಿವರ್ಷವೂ 15ರಿಂದ 20ಸಾವಿರ ಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುತ್ತಿದ್ದರು. ಈ ಬಾರಿ ಕೋವಿಡ್ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷ 25ನೇ ಜಾತ್ರಾ ಮಹೋತ್ಸವವಾಗಿದ್ದು ನಮ್ಮ ಸಂಘದ ವತಿಯಿಂದ ಸುಮಜಾರು 25ಕ್ಕೂ ಹೆಚ್ಚು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ವಸ್ತ್ರ 1ರಿಂದ 3ಕ್ವಿಂಟಾಲ್ ಅಕ್ಕಿ ನೀಡುತ್ತಾ ಬರಲಾಗಿದೆ. ಸರಳ ವಿವಾಹಕ್ಕೂ ದೇವಸ್ಥಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಜಾತ್ರಾ ಮಹೋತ್ಸವವು ಹೊರನಾಡಿನಲ್ಲಿ ನಡೆಯುವ ರಥೋತ್ಸವದ ದಿನದಂದೇ ಇಲ್ಲಿ ಕೂಡ ರಥೋತ್ಸವ ನಡೆಯುವುದು ಒಂದು ವಿಶೇಷ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನಕಾರ್ಯದರ್ಶಿ ಓದುಲಿಂಗೇಗೌಡ, ಉಪಾಧ್ಯಕ್ಷರುಗಳಾದ ಎಸ್.ಪಿ.ನಿಂಗೇಗೌಡ ಮತ್ತು ಎಂ.ಬಿ.ವಿಜಯ್ ಕುಮಾರ್, ಖಜಾಂಚಿ ಆರ್.ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: