
ದೇಶಪ್ರಮುಖ ಸುದ್ದಿ
ವಿಧಾನ ಪರಿಷತ್ ಚುನಾವಣೆ : ಟಿ ಆರ್ ಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಪುತ್ರಿ ಕಣಕ್ಕೆ
ದೇಶ(ಹೈದರಾಬಾದ್),ಮಾ.9:- ಮಾ.14ರಂದು ತೆಲಂಗಾಣದ ಎರಡು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿದ್ದು, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಪುತ್ರಿ ಎಸ್. ವಾಣಿ ದೇವಿ ಅವರು ಟಿ ಆರ್ ಎಸ್ ಅಭ್ಯರ್ಥಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಖಮ್ಮಮ್- ನಲಗೊಂಡ-ವಾರಂಗಲ್ ಮತ್ತು ಹೈದರಾಬಾದ್-ರಂಗರೆಡ್ಡಿ-ಮೆಹಬೂಬ್ನಗರ ಈ ಎರಡು ಪದವೀಧರರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಎಸ್. ವಾಣಿ ದೇವಿ ಶಿಕ್ಷಣ ತಜ್ಞೆ ಯಾಗಿದ್ದು ಟಿಆರ್ಎಸ್ ಅವರನ್ನು ಹೈದರಾಬಾದ್-ರಂಗಾರೆಡ್ಡಿ-ಮಹಬೂಬ್ ನಗರ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದೆ. ಆ ಕ್ಷೇತ್ರದಲ್ಲಿ ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಹಾಲಿ ಎಂಎಲ್ಸಿ ಎನ್. ರಾಮಚಂದ್ರರಾವ್ ಕಣದಲ್ಲಿದ್ದಾರೆ. (ಏಜೆನ್ಸೀಸ್,ಎಸ್.ಎಚ್)