ಕರ್ನಾಟಕನಮ್ಮೂರುಮೈಸೂರು

ರಾತ್ರಿಯಲ್ಲಿ ಗಮನ ಸೆಳೆಯುತ್ತಿದೆ ವಿದ್ಯುದ್ದೀಪಾಲಂಕಾರ

img-20161001-wa0001-webಎತ್ತ ಕಣ್ಣು ಹಾಯಿಸಿದರೂ ಕಾಣುವ ಸೌಂದರ್ಯರಾಶಿ. ಕಣ್ಕುಕ್ಕುವ ಬಣ್ಣಬಣ್ಣದ ವಿದ್ಯುದ್ದೀಪಗಳು, ಇವೆಲ್ಲ ಕಂಡು ಬರುವುದು ಇದೀಗ ಮೈಸೂರಿನಲ್ಲಿ . ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಮೈಸೂರು ಪಾರಂಪರಿಕ ನಗರವಾಗಿದ್ದು, ಪ್ರವಾಸೋದ್ಯಮದಲ್ಲೂ ಹೆಸರಾಗಿದೆ. ಇಲ್ಲಿರುವ ಪ್ರವಾಸಿ ತಾಣಗಳು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ಮಹಾರಾಜರ ಕಾಲದಿಂದಲೇ ಆರಂಭಗೊಂಡಿರುವ ದಸರಾ ಇಂದು ಕೂಡ ಅದೇ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಮುಂದುವರಿದಿದೆ. ಇಂದಿನಿಂದ ದಸರಾ ಉತ್ಸವ ಆರಂಭಗೊಳ್ಳಲಿದ್ದು ಈಗಾಗಲೇ ಸಾಕಷ್ಟು ಪ್ರವಾಸಿಗರು ನಗರದಲ್ಲಿ ಜಮಾವಣೆಯಾಗಿದ್ದಾರೆ.

ದಸರಾ ಉತ್ಸವವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ರಾತ್ರಿಯ ಸಮಯದಲ್ಲಿ  ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ. ಇದೀಗ ನಗರದ ಪ್ರಮುಖ ವೃತ್ತಗಳು ರಾಮಸ್ವಾಮಿ ಸರ್ಕಲ್, ಚಾಮರಾಜ ಸರ್ಕಲ್, ಕೆ.ಆರ್.ಸರ್ಕಲ್ ಗಳು ಕಣ್ಣು ಕೋರೈಸುವ ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿದೆ.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಲ್ಲಿಯೂ  ದೀಪಾಲಂಕಾರ ಮಾಡಲಾಗಿದೆ. ಶ್ರೀಕಂಠದತ್ತ ನರಂಸಿಹರಾಜ ಒಡೆಯರ್ ಮಾದರಿಯ ವಿದ್ಯುದ್ದೀಪಾಲಂಕಾರವು ಗಮನ ಸೆಳೆಯುತ್ತಿದೆ.

Leave a Reply

comments

Related Articles

error: