ಕ್ರೀಡೆಪ್ರಮುಖ ಸುದ್ದಿ

ಮೊಣಕೈ ಗಾಯ : ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್ ಹೊರಕ್ಕೆ

ವಿದೇಶ( ವೆಲ್ಲಿಂಗ್ಟನ್)ಮಾ.10:- ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮೊಣಕೈ ಗಾಯದಿಂದಾಗಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಇದನ್ನು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.

ರವಿವಾರವಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲ್ಯಾಂಡ್‌ 3-2ರಿಂದ ಗೆದ್ದಿತ್ತು. ಈ ಸರಣಿ ವೇಳೆ ವಿಲಿಯಮ್ಸನ್‌ ಅವರ ಮೊಣಕೈಗೆ ನೋವಾಗಿತ್ತು. ಇದೇನೂ ಗಂಭೀರ ಸಮಸ್ಯೆ ಅಲ್ಲವಾದರೂ ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿರಿಸಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಕಿವೀಸ್‌ ತಂಡದ ಪ್ರಧಾನ ಕೋಚ್‌ ಗ್ಯಾರಿ ಸ್ಟೆಡ್‌ ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: