ಕ್ರೀಡೆಪ್ರಮುಖ ಸುದ್ದಿ

ಆಫ್‌ ಸ್ಪಿನ್ನರ್ ಆರ್. ಅಶ್ವಿನ್ ಗೆ ಫೆಬ್ರವರಿ ತಿಂಗಳ ಶ್ರೇಷ್ಠ ಆಟಗಾರ ಗೌರವ

ವಿದೇಶ( ದುಬೈ)ಮಾ.10:-ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಫೆಬ್ರವರಿ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಭಾರತ ಕ್ರಿಕೆಟ್ ತಂಡದ ಆಫ್‌ ಸ್ಪಿನ್ನರ್ ಆರ್. ಅಶ್ವಿನ್ ಪಾತ್ರರಾಗಿದ್ದಾರೆ.

ಕಳೆದ ತಿಂಗಳು ಅವರು ಆಡಿದ ಮೂರು ಟೆಸ್ಟ್ ‌ಗಳಲ್ಲಿ 24 ವಿಕೆಟ್‌ ಗಳಿಸಿದ್ದರು. ಒಟ್ಟು 176 ರನ್ ಗಳಿಸಿದರು. ಅದರಲ್ಲಿ ಒಂದು ಶತಕ ಕೂಡ ಬಾರಿಸಿದ್ದರು. ಅಹಮದಾಬಾದಿನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ನಲ್ಲಿ ಅವರು 400 ವಿಕೆಟ್‌ಗಳ ಮೈಲುಗಲ್ಲು ಕೂಡ ದಾಟಿದ್ದರು. ಈ ಸರಣಿಯಲ್ಲಿ ಭಾರತ ತಂಡವು 3-1ರಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ‌ಷಿಪ್ ಫೈನಲ್ ಪ್ರವೇಶಿಸಲು ಮಹತ್ವದ ಕಾಣಿಕೆ ನೀಡಿದರು.

ತಿಂಗಳ ಆಟಗಾರ ಸ್ಪರ್ಧೆಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (333 ರನ್ ಮತ್ತು ಆರು ವಿಕೆಟ್‌) ಮತ್ತು ಪದಾರ್ಪಣೆ ಟೆಸ್ಟ್ ‌ನಲ್ಲಿಯೇ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದ ವೆಸ್ಟ್‌ ಇಂಡೀಸ್‌ ತಂಡದ ಯುವ ಆಟಗಾರ ಕೈಲ್ ಮೆಯರ್ಸ್ ಇದ್ದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ ಬಳಗವು 395 ರನ್‌ಗಳ ಗುರಿ ಸಾಧಿಸಿ ಜಯಿಸಲು ಅವರ ದ್ವಿಶತಕ ಕಾರಣವಾಗಿತ್ತು. ಈ ಪೈಪೋಟಿಯಲ್ಲಿ ಚೆನ್ನೈನ ಅಶ್ವಿನ್ ಮೇಲುಗೈ ಸಾಧಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: