ಪ್ರಮುಖ ಸುದ್ದಿಮನರಂಜನೆ

ರೋಹಿತ್ ಶೆಟ್ಟಿ  ಜನ್ಮದಿನದಂದು ಸೂರ್ಯವಂಶಿ ಚಿತ್ರ  ಬಿಡುಗಡೆಯ ದಿನಾಂಕ ಘೋಷಣೆ ಸಾಧ್ಯತೆ

ದೇಶ(ಮುಂಬೈ)ಮಾ.10:- ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಟಿ  ಕತ್ರಿನಾ ಕೈಫ್ ಅಭಿನಯದ   ರೋಹಿತ್ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ ಚಿತ್ರವು ಒಂದು ವರ್ಷದ ಸುದೀರ್ಘ ಅವಧಿಯ ನಿರೀಕ್ಷೆಯ ನಂತರ ಅಂತಿಮವಾಗಿ ಏಪ್ರಿಲ್ 2 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಚಿತ್ರದ ಬಿಡುಗಡೆಯ ಕುರಿತು ಚಿತ್ರ ನಿರ್ಮಾಪಕರು, ತಯಾರಕರು, ವಿತರಕರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕ  ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಆದರೆ ಮಾಧ್ಯಮವೊಂದಕ್ಕೆ ಸಿಕ್ಕ ಮಾಹಿತಿಯ ಪ್ರಕಾರ  ‘ಸೂರ್ಯವಂಶಿ’ ಏಪ್ರಿಲ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ ಎನ್ನಲಾಗುತ್ತಿದೆ. ಚಿತ್ರದ ಬಿಡುಗಡೆಯ ದಿನಾಂಕದ ಅಧಿಕೃತ ಪ್ರಕಟಣೆ ರೋಹಿತ್ ಶೆಟ್ಟಿಯವರ ಜನ್ಮದಿನ, ಅಂದರೆ ಮಾರ್ಚ್ 14 ರಂದು ಘೊಷಣೆಯಾಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಾರ್ಚ್ 14 ರಂದು ರೋಹಿತ್ ಶೆಟ್ಟಿ ಅವರ 48 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸೂರ್ಯವಂಶಿ’ ಬಿಡುಗಡೆಗೆ ಯಾವ ಹೊಸ ದಿನಾಂಕವನ್ನು ಘೋಷಿಸಬಹುದು ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: