ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಎಫ್‍ಐಎಎಫ್ ಪ್ರಶಸ್ತಿ

ಮುಂಬೈ,ಮಾ.10- ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಿನಿಮಾ ಸಾಧಕರ ಅಂತಾರಾಷ್ಟ್ರೀಯ ಒಕ್ಕೂಟದ (ಎಫ್ಐಎಎಫ್) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಠತಿ ಎಫ್‍ಐಎಎಫ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಬಚ್ಚನ್ ಪಾತ್ರರಾಗಿದ್ದಾರೆ.

ಹಾಲಿವುಡ್‍ನ ಘಟಾನುಘಟಿ ನಟ ನಟಿಯರ ಸಮ್ಮುಖದಲ್ಲಿ ಮಾ.19 ರಂದು ನಡೆಯಲಿರುವ ವರ್ಚುಯಲ್ ಕಾರ್ಯಕ್ರಮದಲ್ಲಿ ಬಚ್ಚನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವಿಶ್ವದಾದ್ಯಂತ ಇರುವ ಸಿನಿಮಾ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸಲುವಾಗಿ ಆರಂಭವಾಗಿರುವ ಈ ಪ್ರಶಸ್ತಿಯನ್ನು ಕಳೆದ 20 ವರ್ಷಗಳಿಂದ ದೇಶ ವಿದೇಶಗಳ ಹಲವಾರು ಖ್ಯಾತ ನಟ-ನಟಿಯರಿಗೆ ನೀಡಲಾಗಿದೆ. ತಮ್ಮ ಜೀವಮಾನವನ್ನೇ ಸಿನಿಮಾ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅಮಿತಾಬ್ ಅವರಿಗೆ ಈ ಪ್ರಶಸ್ತಿ ನೀಡಲು ಹೆಮ್ಮೆಯಾಗುತ್ತಿದೆ ಎಂದು ಎಫ್‍ಐಎಎಫ್ ಅಧ್ಯಕ್ಷ ಫ್ರೇಡರಿಕ್ ಮೈರ್ ಹೇಳಿದ್ದಾರೆ.

ಸಿನಿಮಾ ವಿಶ್ವ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನೀಡಲಾಗುತ್ತಿರುವ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಭಾಗ್ಯ ಎಂದು ಬಚ್ಚನ್ ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: