ಮೈಸೂರು

ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ನಾಲ್ವರ ಬಂಧನ

ಮೈಸೂರು,ಮಾ.11:- ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

04/03/2021 ರಂದು ರಾತ್ರಿ 10.30 ಗಂಟೆಯಲ್ಲಿ ವ್ಯಕ್ತಿಯೊಬ್ಬರು ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಮಹೇಶ್ ಪಿ.ಯು.ಕಾಲೇಜು ರಸ್ತೆಯಲ್ಲಿ ಹೋಗುವಾಗ ನಾಲ್ಕು ಜನ ಅಪರಿಚಿತ ವ್ಯಕ್ತಿಗಳು ಆತನನ್ನು ಅಡ್ಡಗಟ್ಟಿ, ಹಲ್ಲೆ ಮಾಡಿ 28.000ರೂ. ನಗದು ಹಣ, 25 ಗ್ರಾಂ ತೂಕದ ಚಿನ್ನದ ಸರ ಮತ್ತು ಒಂದು ಒಪ್ಪೋ ಕಂಪನಿಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡ ಮೇಟಗಳ್ಳಿ
ಪೊಲೀಸರು 08/03/2021 ರಂದು ಮಾಹಿತಿ ಮೇರೆಗೆ ಶಾದನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ದಾಳಿ ಮಾಡಿ ಈ ಪ್ರಕರಣದ ಆರೋಪಿಗಳಾದ ವಿಷ್ಣು @ ಲೂಸ್ ಬಿನ್ ಲೇಟ್ ಮಹೇಶ್ ( 19) 1ನೇ ಮೇನ್, ಬಿ.ಎಂ.ಶ್ರೀ ನಗರ, ಮೈಸೂರು, ಗಿರೀಶ.ಆರ್ @ ನೆಟ್ಟು ಬಿನ್ ರಾಜು( 19), 1ನೇ ಮೇನ್, ಬಿ.ಎಂ.ಶ್ರೀ ನಗರ, ಮೈಸೂರು, ಅಜಿತ್ ಕುಮಾರ್.ಪಿ.ಜಿ @ ತೋಟ ಬಿನ್ ಗಣೇಶ್,( 19 )ವರ್ಷ, ಶ್ಯಾದನಹಳ್ಳಿ ಗ್ರಾಮ, ನಾಗನಹಳ್ಳಿ ಅಂಚೆ, ಮೈಸೂರು ತಾ. & ಜಿಲ್ಲೆ, ಯಶವಂತ.ಎಂ @ ಬಿಲ್ಲಿ ಬಿನ್ ಮೋಹನ್ ಕುಮಾರ್ ( 22 ), ಬೈರವೇಶ್ವರ ನಗರ, ಬಸವನಗುಡಿ ಸರ್ಕಲ್, ಹೆಬ್ಬಾಳ್, ಮೈಸೂರು ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆರೋಪಿಗಳು   ಕೃತ್ಯವೆಸಗಿರುವುದನ್ನು ಒಪ್ಪಿಕೊಂಡ ಮೇರಗೆ ಆರೋಪಿಗಳಿಂದ 14.000 ರೂ ನಗದು ಹಣ, 1 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ಉಳಿದ ನಗದು
ಹಣವನ್ನು ಖರ್ಚು ಮಾಡಿಕೊಂಡಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರುನಗರದ ಡಿ.ಸಿ.ಪಿ ಗೀತಪ್ರಸನ್ನರವರು ಹಾಗೂ
ನರಸಿಂಹರಾಜ ವಿಭಾಗದ ಎ.ಸಿ.ಪಿ ಎಂ. ಶಿವಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್  ಠಾಣೆಯ ಪೊಲೀಸ್ ಇನ್ಸ ಪೆಕ್ಟರ್ ಎ.ಮಲ್ಲೇಶ್, ಪಿ.ಎಸ್.ಐ ವಿಶ್ವನಾಥ್, ನಾಗರಾಜನಾಯ್ಕ್, ಎ.ಎಸ್.ಐ ಪೊನ್ನಪ್ಪ, ಅನಿಲ್ ಶಂಕಪಾಲ್, ಸಿಬ್ಬಂದಿಯವರಾದ ದಿವಾಕರ.ಕೆ.ಜೆ, ಪ್ರಶಾಂತ್‍ ಕುಮಾರ್. ಕೃಷ್ಣ.ಹೆಚ್.ಬಿ, ಲಿಖಿತ್, ಆಶಾ, ಚೇತನ್, ಲಿಂಗರಾಜಪ್ಪ, ಎಂ.ಕಾಂತ, ರಮೇಶ, ಸುರೇಶ್, ಜೀವನ್, ಗೌರಿಶಂಕರ್, ಹನುಮಂತ ಕಲ್ಲೇದ್ ಅವರುಗಳು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: