ಕ್ರೀಡೆಪ್ರಮುಖ ಸುದ್ದಿ

ವಿಜಯ್‌ ಹಜಾರೆ ಟ್ರೋಫಿ : ಸೋತ ಕರ್ನಾಟಕ ; ಮುಂಬೈ ತಂಡಕ್ಕೆ ಗೆಲುವು

ದೇಶ( ನವದೆಹಲಿ)ಮಾ.12:- ಹಿಂದಿನ ಬಾರಿಯ ಚಾಂಪಿಯನ್‌ ಕರ್ನಾಟಕ ವಿಜಯ್‌ ಹಜಾರೆ ಟ್ರೋಫಿ ಸೆಮಿಫೈನಲ್‌ ಮುಖಾಮುಖಿಯಲ್ಲಿ ಆಘಾತಕಾರಿಯಾಗಿ ಸೋತಿದೆ. ಮುಂಬೈ ವಿರುದ್ಧ 72 ರನ್ನುಗಳಿಂದ ಸೋತು ಕೂಟದಿಂದ ನಿರ್ಗಮಿಸಿದೆ. ಖ್ಯಾತ ಕ್ರಿಕೆಟಿಗ ವಿಜಯ್‌ ಹಜಾರೆ ಅವರ ಜನ್ಮದಿನದಂದೇ ಮುಂಬೈ ತಂಡ ಸ್ಮರಣೀಯ ಗೆಲುವು ದಾಖಲಿಸಿದ್ದು ವಿಶೇಷವಾಗಿತ್ತು.
ಭಾನುವಾರದ ಪ್ರಶಸ್ತಿ ಸಮರದಲ್ಲಿ ಮುಂಬೈ ಮತ್ತು ಉತ್ತರಪ್ರದೇಶ ತಂಡಗಳು ಸೆಣೆಸಲಿವೆ. ಇನ್ನೊಂದು ಸೆಮಿಫೈನಲ್ ‌ನಲ್ಲಿ ಗುಜರಾತ್‌ ವಿರುದ್ಧ ಯುಪಿ 5 ವಿಕೆಟ್‌ ಗಳ ಜಯ ಸಾಧಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: