ಪ್ರಮುಖ ಸುದ್ದಿವಿದೇಶ

ಕೋವಿಡ್ ವೈರಸ್ ದೇಶಕ್ಕೆ ಕಾಲಿಟ್ಟು ಒಂದು ವರ್ಷ: 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ ಜೊ ಬೈಡನ್ 

ವಾಷಿಂಗ್ಟನ್,ಮಾ.12-ಕೋವಿಡ್ ವೈರಸ್ ದೇಶಕ್ಕೆ ಕಾಲಿಟ್ಟು ಒಂದು ವರ್ಷವಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಿದ್ದಾರೆ.

ಇದಕ್ಕೂ ಮೊದಲು ನಿನ್ನೆ ಅವರು 1.9 ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ್ದಾರೆ. ಶ್ವೇತಭವನದ ಒವಲ್ ಕಚೇರಿಯಲ್ಲಿ ಆರ್ಥಿಕ ಪ್ರೋತ್ಸಾಹಕಕ್ಕೆ ಸಹಿ ಹಾಕಿದರು.

ನಂತರ ಮಾತನಾಡಿದ ಅಧ್ಯಕ್ಷ ಬೈಡನ್ ಈ ಐತಿಹಾಸಿಕ ಮಸೂದೆಯು ಈ ದೇಶದ ಬೆನ್ನೆಲುಬಾಗಿದ್ದು, ದೇಶವನ್ನು ಪುನರ್ನಿರ್ಮಿಸಲು ಮತ್ತು ಈ ರಾಷ್ಟ್ರದ ದುಡಿಯುವ ಜನರ ವರ್ಗ, ಮಧ್ಯಮ ವರ್ಗದ ಜನರು, ದೇಶವನ್ನು ನಿರ್ಮಿಸಿದವರಿಗೆ ಹೋರಾಟದ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನ ಎಲ್ಲಾ ರಿಪಬ್ಲಿಕನ್ ಸಂಸದರು ಈ ಮಸೂದೆಗೆ ವಿರೋಧ ಹೇಳಿದ್ದರೂ ಕೂಡ ಶೇಕಡಾ 60ರಷ್ಟು ಮಂದಿ ಅನುಮೋದಿಸಿರುವುದರಿಂದ ಅಧ್ಯಕ್ಷರು ಸಹಿ ಹಾಕಿದ್ದು ಇದಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ ಸಹ ಶ್ಲಾಘಿಸಿದೆ.

ಈ ವಾರದ ಆರಂಭದಲ್ಲಿ ಅಮೆರಿಕ ಕಾಂಗ್ರೆಸ್ ಮಸೂದೆಗೆ ಅನುಮೋದನೆ ನೀಡಿತ್ತು. ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ಆರೋಗ್ಯ ಮತ್ತು ಕೋವಿಡ್-19 ಲಸಿಕೆಗೆ ಹಣ ಸಂಗ್ರಹಕ್ಕೆ 1,400 ಡಾಲರ್ ಬಳಕೆಯಾಗಲಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: