ಕರ್ನಾಟಕಪ್ರಮುಖ ಸುದ್ದಿ

ಪಕ್ಷಾಂತರ ಹಾವಳಿ: ಜೆಡಿಎಸ್ ವರಿಷ್ಠರಿಗೆ ತಲೆನೋವು

ಬೆಂಗಳೂರು,ಮಾ.12-ಪಕ್ಷಾಂತರ ಹಾವಳಿಯಿಂದ ಜೆಡಿಎಸ್ ಪಕ್ಷ ಕಂಗೆಟ್ಟಿದೆ. ಪ್ರಮುಖಂಡರೇ ಪಕ್ಷ ತೊರೆಯುತ್ತಿರುವುದು ಜೆಡಿಎಸ್‌ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಎಂಸಿ ಮನಗೊಳಿ ಪುತ್ರ ಅಶೋಕ್ ಮನಗೊಳಿ ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಇದೀಗ ಮಧುಬಂಗಾರಪ್ಪ ಕೂಡಾ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರುತ್ತಿದ್ದಾರೆ.

ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಮಧುಬಂಗಾರಪ್ಪ ಅವರು ಜೆಡಿಎಸ್‌ ಪಕ್ಷವನ್ನು ತೊರೆದಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಸಾಬೀತಾಗಿದೆ.

ಮತ್ತೊಂದು ಕಡೆಯಲ್ಲಿ ಜಿ.ಟಿ ದೇವೇಗೌಡ ಪಕ್ಷದಲ್ಲಿ ಶಾಸಕರಾಗಿ ಇದ್ದರೂ ಅವರು ಯಾವಾಗ ಪಕ್ಷದಿಂದ ಹೊರಬರುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ. ಪಕ್ಷದ ಯಾವುದೇ ಸಭೆ, ಸಮಾರಂಭ, ವೇದಿಕೆಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಹಲವು ನಾಯಕರು ಜೆಡಿಎಸ್‌ ಪ್ರಮುಖರ ನಡೆಯಿಂದ ಬೇಸತ್ತಿದ್ದು ಪಕ್ಷಾಂತರ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.

ಯಾರು ಎಲ್ಲಿ ಬೇಕಾದರೂ ಹೋಗುವ ಅವಕಾಶಗಳು ಇವೆ. ಪಕ್ಷ ತ್ಯಜಿಸುವ ವಿಷಯಕ್ಕೆ ಮಹತ್ವ ಕೊಡುವ ಅಗತ್ಯತೆ ನನಗಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಪಕ್ಷಾಂತರ ಮತ್ತಷ್ಟು ತಲೆನೋವಾಗಿ ಪರಿಣಮಿಸಲಿದೆ ಎಂಬುದಂತೂ ಸತ್ಯ. (ಎಂ.ಎನ್)

 

Leave a Reply

comments

Related Articles

error: