ಕರ್ನಾಟಕಪ್ರಮುಖ ಸುದ್ದಿ

ಹಾಸನ: ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಒಲ್ಲೆ ಎನ್ನುತ್ತಿರುವ ವರ; ಆತ್ಮಹತ್ಯೆಗೆ ಯತ್ನಿಸಿದ ವಧು

ಹಾಸನ,ಮಾ.12-ಮದುವೆಗೆ ಎರಡು ತಿಂಗಳು ಬಾಕಿ ಇರುವಾಗ ವರನೊಬ್ಬ ವಧುವಿಗೆ ಕೈಕೊಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಇದೀಗ ಮದುವೆಗೆ ಎರಡು ತಿಂಗಳು ಬಾಕಿ ಇರುವಾಗ ವರ ಮದುವೆ ಬೇಡವೆನ್ನುತ್ತಿದ್ದಾನೆ. ಇದರಿಂದ ನೊಂದಿರುವ ವಧು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೆ, ವಧುವಿನ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹಾಸನದ ಬೇಲೂರು ಗ್ರಾಮವೊಂದರ ನಿವಾಸಿ ಕಾವ್ಯಾ ಮತ್ತು ಚಿಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ ಸಿ.ಎಸ್.ನಿಶ್ಚಿತ್​ ಗೆ ಫೆ.14 ರಂದು ನಿಶ್ಚಿತಾರ್ಥ ನೇರವೇರಿದೆ. ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಆಗಬೇಕು. ಹೋಳಿಗೆ ಊಟ, ವಿಡಿಯೋಗ್ರಫಿ ಬೇಕು ಎಂದು ನಿಶ್ಚಿತ್​ ಪಾಲಕರು ಬೇಡಿಕೆ ಇಟ್ಟಿದ್ದರು. ಅದರಂತೆಯೇ ವಧುವಿನ ತಂದೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಟ್ಟಿದ್ದರು. ಇದೇ ಮೇ 09ಕ್ಕೆ ಮದುವೆ ದಿನಾಂಕ ನಿಗದಿಯಾಗಿದ್ದು, ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದೆ.

ಆದರೆ ನಿಶ್ಚಿತ್ ಈಗ ಮದುವೆ ಬೇಡವೆನ್ನುತ್ತಿದ್ದಾನೆ. ಈ ಬಗ್ಗೆ ಅರೆಹಳ್ಳಿ ಠಾಣೆ ಮೆಟ್ಟಿಲೇರಿದರು ವಧುವಿನ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಹಾಸನ ಎಸ್ಪಿ ಕಚೇರಿಗೆ ವಧು ಹಾಗೂ ಪೋಷಕರು ದೂರು ನೀಡಿದ್ದಾರೆ. ದೂರಿನಲ್ಲಿ ಮದುವೆಗೂ ಮುಂಚೆ ನಿಶ್ಚಿತ್​, ನನ್ನನ್ನು ಗೋವಾಗೆ ಕರೆದುಕೊಂಡ ಹೋದರು. ಹೇಳಿದಂತೆ ಕೇಳಲು ಒತ್ತಾಯಿಸಿದರು. ಆದರೆ, ನಾನು ಒಪ್ಪಲಿಲ್ಲ. ಇದೇ ಕಾರಣಕ್ಕೆ ನನ್ನ ಮೇಲೆ ಕೋಪಿಸಿಕೊಂಡರು. ಬಳಿಕ ನಿಶ್ಚಿತ್​ ಮತ್ತು ಅವರ ತಾಯಿ ನನ್ನ ಮೇಲೆ ಸಂದೇಹ ವ್ಯಕ್ತಪಡಿಸಿ, ನನ್ನ ವ್ಯಕ್ತಿತ್ವ ಸರಿಯಿಲ್ಲವೆಂದು ಹೇಳಿ ಮದುವೆ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ವಧು ಆರೋಪಿಸಿದ್ದಾರೆ.

ನಿಶ್ಚಿತ್​ ನನ್ನೆದುರು ಬಂದು ಮಾತನಾಡುವುದುಕ್ಕೂ ತಯಾರಿಲ್ಲ. ನಾನು ಆತನನ್ನೇ ಮದುವೆಯಾಗುವುದು. ಇದು ನನ್ನ ಮರ್ಯಾದೆ ಪ್ರೆಶ್ನೆ. ಇಲ್ಲವಾದರೆ ನಾನು ಸಾಯುತ್ತೇನೆಂದು ವಧು ಹೇಳಿದ್ದಾಳೆ. (ಎಂ.ಎನ್)

Leave a Reply

comments

Related Articles

error: