ಮೈಸೂರು

ಕಾವೇರಿ ಕಲಾ ಗ್ಯಾಲರಿಗೆ ಭೇಟಿ ನೀಡಿದ ಸಚಿವ ಸಿ.ಪಿ.ಯೋಗೇಶ್ವರ್

ಮೈಸೂರು,ಮಾ.12-ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಾಣವಾಗಿರುವ ಕಾವೇರಿ ಕಲಾ ಗ್ಯಾಲರಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಭೇಟಿ ನೀಡಿ ವೀಕ್ಷಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಕಾವೇರಿ ಕಲಾ ಗ್ಯಾಲರಿ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಶೀಘ್ರದಲ್ಲೇ ಗ್ಯಾಲರಿಯನ್ನು ಉದ್ಘಾಟಿಸಲಾಗುವುದು ಎಂದರು.

ಇಲ್ಲಿ ಕಾವೇರಿ ನದಿಯ ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ ಸಂಪೂರ್ಣ ಚಿತ್ರಣ ಸಿಗುವುದರ ಜೊತೆಗೆ ಕಾವೇರಿ ನದಿಯ ಉಗಮದಿಂದ ಹಿಡಿದು ಸಮುದ್ರ ಸೇರುವವರೆಗಿನ ಸ್ಥಳಗಳ ಪರಿಚಯವಾಗಲಿದೆ. ಇದು ಎಲ್ಲರ ಗಮನ ಸೆಳೆಯುವ ಕಲಾಕೇಂದ್ರವಾಗಲಿದೆ ಎಂದು ಹೇಳಿದರು.

ವಸ್ತುಪ್ರದರ್ಶನವನ್ನು ಆಧುನಿಕವಾಗಿ ಕಲಾಕೇಂದ್ರವಾಗಿ ಕಟ್ಟಬೇಕೆಂದು ಸುಮಾರು 150 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದೇವೆ. ಇಂದು ಅದರ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುನಾರ್ ಗೌಡ ಸೇರಿದಂತೆ ಇತರರು ಇದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: