ಕ್ರೀಡೆತುರ್ತು ಮಾಹಿತಿಪ್ರಮುಖ ಸುದ್ದಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಡಿಸ್ಚಾರ್ಜ್

ದೇಶ(ನವದೆಹಲಿ).ಮಾ13:- ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಅವರು ಮನೆಗೆ ಮರಳಿದ್ದಾರೆ.

74 ವರ್ಷದ ಬೇಡಿ ಅವರು ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇಲ್ಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ ಅವರು ಈ ಚಿಕಿತ್ಸೆ ಪಡೆದಿದ್ದರು. ಅದರ ನಂತರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅದಕ್ಕೂ ಶಸ್ತ್ರಚಿಕಿತ್ಸೆ ನಡೆದಿತ್ತು.

‘ಶಸ್ತ್ರಚಿಕಿತ್ಸೆ ಮಾಡಿದ್ದ ಹೃದಯದ ಮೂರು ರಕ್ತನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಫೆ. 18ರಂದು ಡಾ. ಗಣೇಶ್ ಶಿವಮಣಿ ಅವರು ಬೈಪಾಸ್ ಸರ್ಜರಿ ಮಾಡಿದ್ದರು. ಬೇಡಿಯವರು ಚೇತರಿಸಿಕೊಂಡಿದ್ದು, ಗುರುವಾರ ಮನೆಗೆ ಕಳುಹಿಸಲಾಗಿದೆ’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: