ಮೈಸೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆ ಸಿಡಿ ಪ್ರಕರಣದ ಕೇಸು ನೋಂದಾಯಿಸಿ ತನಿಖೆ ಮಾಡುವಂತೆ ಒತ್ತಾಯ

ಮೈಸೂರು,ಮಾ.13:- ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆ ಸಿಡಿ ಪ್ರಕರಣದ ಕೇಸು ನೋಂದಾಯಿಸಿ ತನಿಖೆ ಮಾಡುವಂತೆ ಕರ್ನಾಟಕ ಪ್ರಜಾಪಾರ್ಟಿ ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪ್ರಜಾಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಬಿ.ಶಿವಣ್ಣ ಮಾತನಾಡಿ ರಾಜಕೀಯ ಪವಿತ್ರ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಸೇವೆ ಮಾಡಲು ಬರುವ ವ್ಯಕ್ತಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ನೈತಿಕತೆಯನ್ನು ಎತ್ತಿ ಹಿಡಿದು ಪಾರದರ್ಶಕತೆಯಿಂದ ಸಾರ್ವಜನಿಕ ಜೀವನ ಮಾಡಿ ಮೌಲ್ಯಾಧಾರಿತ ನಿಸ್ವಾರ್ಥ ಸಮಾಜ ಸೇವೆ ಮಾಡುವುದು ರಾಜಕಾರಣಿಗಳ ಕರ್ತವ್ಯವಾಗಿರಬೇಕೇ ಹೊರತು ಸ್ವಾರ್ಥ ಸೇವೆಯೇ ಅವರ ಉದ್ದೇಶವಾಗಿರಬಾರದುಯ ಎಂದರು.

ರಾಜಕಾರಣಕ್ಕೆ ಬರುವವರು ತುಳಿತಕ್ಕೆ ಒಳಗಾದವರ ಹಾಗೂ ಧ್ವನಿ ಇಲ್ಲದವರ ಪರ ಧ್ವನಿ ಎತ್ತಿ ಅವರ ಬದುಕನ್ನು ಕಟ್ಟಿಕೊಡಲು ರಾಜಕಾರಣಕ್ಕೆ ಬರಬೇಕೇ ಹೊರತು ತಾವೇ ಬದುಕಲು ರಾಜಕೀಯ ಕ್ಷೇತ್ರಕ್ಕೆ ಬರಬಾರದು. ರಮೇಶ್ ಜಾರಕಿ ಹೊಳಿಯವರು ಯುವತಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಾವಳಿ ವಿಡಿಯೋವನ್ನು ದಿನೇಸ್ ಕಲ್ಲಹಳ್ಳಿ ಬಿಡುಗಡೆ ಮಾಡಿರುವ ಸಂಬಂಧ ವೈರಲ್ ಆಗಿರುವುದು ರಮೇಶ್ ಜಾರಕಿಹೊಳಿಯವರ ಮತ್ತೊಂದು ಮುಖ ಇಡೀ ಸಮಾಜಕ್ಕೆ  ಅನಾವರಣಗೊಂಡಿದೆ. ಇವರು ಸಮಾಜಸೇವೆ ಮಾಡಲು ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿರುವುದಿಲ್ಲ. ಹಾಗೆಯೇ ಬಾಂಬೇ ಮಿತ್ರ ಮಂಡಳಿಯ ಸದಸ್ಯ ಸಚಿವರು ನ್ಯಾಯಾಲಯದಲ್ಲಿ ಸಿಡಿ ವೈರಲ್ ಮಾಡದಂತೆ ತಡೆಯಾಜ್ಞೆ ತಂದಿರುವುದು ಸಹ ಅನುಮಾನಕ್ಕೆ ಆಸ್ಪದ ಕೊಡುತ್ತದೆ. ಹಾಗಾಗಿ ಸಾರ್ವಜನಿಕರು ಇವರನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ಗೆ ಒಪ್ಪಿಸಿ ಸತ್ಯಾಸತ್ಯತೆಯನ್ನು ಸಾರ್ವಜನಿಕರ ಮುಂದಿಡಬೇಕೆಂದು ಆಗ್ರಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: