Uncategorized

ರಾಷ್ಟ್ರಧ್ವಜ ವಿನ್ಯಾಸಕಾರನಿಗೆ `ಭಾರತ ರತ್ನ’ ನೀಡಲು ಆಂಧ್ರ ಸಿಎಂ ಮನವಿ

ಅಮರಾವತಿ,ಮಾ.13- ರಾಷ್ಟ್ರಧ್ವಜ ವಿನ್ಯಾಸಗೊಳಿಸಿದ ದಿವಂಗತ ಪಿಂಗಳಿ ವೆಂಕಯ್ಯ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಿಂಗಳಿ ವೆಂಕಯ್ಯ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ನಡೆಯುವ ‘ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದೇ ವೇಳೆ ಪಿಂಗಳಿ ವೆಂಕಯ್ಯ ಅವರ ಪುತ್ರಿ ಘಂಟಸಾಲ ಸೀತಾಮಹಾಲಕ್ಷ್ಮೀ ಅವರನ್ನು ಸನ್ಮಾನಿಸಿ, ಅವರಿಗೆ 75 ಲಕ್ಷ ರೂ. ನೀಡಿದರು.

1921ರ ಏಪ್ರಿಲ್ 1ರಂದು ಮಹಾತ್ಮಾ ಗಾಂಧಿ ವಿಜಯವಾಡ ನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಿಂಗಳಿ ವೆಂಕಯ್ಯ ತಾವು ವಿನ್ಯಾಸ ಮಾಡಿದ್ದ ಧ್ವಜವನ್ನು ಗಾಂಧೀಜಿಗೆ ನೀಡಿದ್ದರು. 1947ರ ಜುಲೈ 22ರಂದು ನಡೆದ ಸಂವಿಧಾನ ಸಭೆಯು ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಅಂಗೀಕರಿಸಿತು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: