
ದೇಶಪ್ರಮುಖ ಸುದ್ದಿ
ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಎಸ್ ಪಿ ಜಗನ್ನಾಥನ್ ನಿಧನ
ದೇಶ( ಚೆನ್ನೈ)ಮಾ.15:- ದಕ್ಷಿಣ ಭಾರತದ ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಎಸ್ ಪಿ ಜಗನ್ನಾಥನ್ ನಿಧನರಾಗಿದ್ದಾರೆ.
ಅವರಿಗೆ 61 ವರ್ಷ ವಯಸ್ಸಾಗಿತ್ತು. ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ದೇಶಕ ಎಸ್.ಪಿ. ಜಗನ್ನಾಥನ್ ನಿನ್ನೆ ಬೆಳಿಗ್ಗೆ ಕೊನೆಯುಸಿರೆಳಿದಿದ್ದಾರೆ ಎಂದು ತಿಳಿದುಬಂದಿದೆ. ಜಗನ್ನಾಥನ್ ಅವರಿಗೆ ಮನೆಯಲ್ಲಿ ಹೃದಯ ಸ್ತಂಭನವಾಗಿತ್ತು. ಪ್ರಜ್ಞಾಹೀನಸ್ಥಿತಿಯಲ್ಲಿ ಕೆಳಗೆ ಬಿದ್ದಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಮತ್ತೋರ್ವ ನಿರ್ದೇಶಕ ಅರುಮುರುಗಕುಮಾರ್ ಜಗನ್ನಾಥನ್ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ.
ಸಾವಿಗೂ ಮುನ್ನ ಜಗನ್ನಾಥನ್ ಅವರು ತಮ್ಮ ಮುಂದಿನ ಚಿತ್ರ ಲಾಭಂನ ಸಂಕಲನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ಚಿತ್ರದಲ್ಲಿ ವಿಜಯ ಸೇತುಪಥಿ ಹಾಗೂ ನಟಿ ಶೃತಿ ಹಾಸನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)