ದೇಶಪ್ರಮುಖ ಸುದ್ದಿ

86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕೇರಳ ಪ್ರದೇಶ ಕಾಂಗ್ರೆಸ್ : ಉಮ್ಮನ್ ಚಾಂಡಿ ಕಣದಲ್ಲಿ

ದೇಶ( ತಿರುವನಂತಪುರಂ)ಮಾ.15:- ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಟ್ಟಿ ರಾಮಚಂದ್ರನ್ ಬಹುನಿರೀಕ್ಷಿತ 86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಉಳಿದ ಆರು ವಿವಾದಿತ ಸ್ಥಾನಗಳಾದ ಕಾಲ್ಪೆಟ್ಟ, ನಿಲಾಂಬೂರ್, ವತ್ತಿಯೂರ್ಕಾವ್, ಕುಂದರ, ತವನೂರು ಮತ್ತು ಪಟ್ಟಾಂಬಿ ಅಭ್ಯರ್ಥಿಗಳ ಪಟ್ಟಿಯನ್ನು ಹೆಚ್ಚಿನ ಮಾತುಕತೆ ನಡೆಸಿದ ನಂತರ ಇಂದು ಪ್ರಕಟಿಸಲಾಗುತ್ತಿದೆ.
ಕಾಂಗ್ರೆಸ್ ಪ್ರಕಟಿಸಿರುವ ಪಟ್ಟಿಯಲ್ಲಿ 25-50 ವರ್ಷದೊಳಗಿನ 46 ಅಭ್ಯರ್ಥಿಗಳಿದ್ದು, ಅವರಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು ಹೊಸ ಮುಖಗಳಿವೆ.
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ದಾಖಲೆಯ 11 ಬಾರಿ ಸ್ಪರ್ಧಿಸಿದ್ದ ಪುತುಪ್ಪಲ್ಲಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: