ಕ್ರೀಡೆಪ್ರಮುಖ ಸುದ್ದಿ

ಎರಡನೇ ಬಾರಿಗೆ ತಂದೆಯಾಗಲಿದ್ದಾರೆ ಕ್ರಿಕೆಟಿಗ ಹರ್ಭಜನ್ ಸಿಂಗ್

ದೇಶ(ಮುಂಬೈ)ಮಾ.15:-  ಕ್ರಿಕೆಟಿಗ ಹರ್ಭಜನ್ ಸಿಂಗ್ ಎರಡನೇ ಬಾರಿಗೆ ತಂದೆಯಾಗಲಿದ್ದಾರೆ. ಈ ಗುಡ್ ನ್ಯೂಸ್ ಹಂಚಿಕೊಳ್ಳುವಾಗ ಅವರ ಪತ್ನಿ ಮತ್ತು ನಟಿ ಗೀತಾ ಬಾಸ್ರಾ ಜೊತೆಗಿನ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ದಂಪತಿಗಳು ಜುಲೈನಲ್ಲಿ ಎರಡನೇ ಬಾರಿಗೆ ಪೋಷಕರಾಗಲಿದ್ದಾರೆ. ಗೀತಾ ಬಾಸ್ರಾ ಹಂಚಿಕೊಂಡ ಚಿತ್ರದಲ್ಲಿ ಹರ್ಭಜನ್ ಮತ್ತು ಅವರ ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಹರ್ಭಜನ್ ಮತ್ತು ಗೀತಾ ಬಸ್ರಾ ಅವರಿಗೆ ಹಿನಾಯಾ ಎಂಬ ಐದು ವರ್ಷದ ಮಗಳಿದ್ದಾಳೆ.  ಚಿತ್ರದಲ್ಲಿ ಹಿನಾಯಾ ತನ್ನ ತಾಯಿಯ ಹೊಟ್ಟೆಯಲ್ಲಿರುವ ಮಗುವನ್ನು  ಚುಂಬಿಸುತ್ತಿರುವುದು ಕಾಣಿಸುತ್ತಿದೆ. ಟೀ ಶರ್ಟ್ ನಲ್ಲಿ ಶೀಘ್ರವೇ ನಾನು ಹಸೋದರಿಯಾಗಲಿದ್ದೇನೆ ಎಂಬುದನ್ನು ಬರೆಯಲಾಗಿದೆ. ಗೀತಾ ಬಾಸ್ರಾ ಜನಿಸಿದ್ದು ಬ್ರಿಟನ್‌ನಲ್ಲಿ. 2006 ರಲ್ಲಿ, ಇಮ್ರಾನ್ ಹಶ್ಮಿ ಅವರೊಂದಿಗೆ ‘ದಿಲ್ ದಿಯಾ ಹೈ’ ಚಿತ್ರದ ಮೂಲಕ ಬಾಲಿವುಡ್‌ ಗೆ ಪಾದಾರ್ಪಣೆ ಮಾಡಿದರು.  ನಂತರ ಅವರ ಮತ್ತೊಂದು ಚಿತ್ರ ‘ದಿ ಟ್ರೈನ್’ ಕೂಡ ಇಮ್ರಾನ್ ಹಶ್ಮಿ ಅವರೊಂದಿಗೆ ಬಂತು.   ರಾಹತ್ ಫತೇಹ್ ಅಲಿ ಖಾನ್ ಅವರ ಮ್ಯೂಸಿಕ್ ವಿಡಿಯೋದಲ್ಲಿ   ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: