
ದೇಶಪ್ರಮುಖ ಸುದ್ದಿ
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಖ್ಯಾತ ವರ್ಣಚಿತ್ರಕಾರ ಲಕ್ಷ್ಮಣ್ ಪೈ ನಿಧನ
ಪಣಜಿ,ಮಾ.15- ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಖ್ಯಾತ ವರ್ಣಚಿತ್ರಕಾರ ಲಕ್ಷ್ಮಣ್ ಪೈ (95) ಅವರು ನಿಧನರಾಗಿದ್ದಾರೆ.
ನಿನ್ನೆ ಸಂಜೆ ಗೋವಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಲಕ್ಷ್ಮಣ್ ಪೈ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಗೋವಾ ಇಂದು ರತ್ನವೊಂದನ್ನು ಕಳೆದುಕೊಂಡಿದೆ. ಕಲಾ ಕ್ಷೇತ್ರದಲ್ಲಿ ಅವರು ನೀಡಿದ ಅಪಾರ ಕೊಡುಗೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪವಿದೆ, ಓಂ ಶಾಂತಿ ಎಂದು ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ.
1926 ರಲ್ಲಿ ಗೋವಾದಲ್ಲಿ ಜನಿಸಿದ ಲಕ್ಷ್ಮಣ್ ಪೈ ಅವರಿಗೆ ಪದ್ಮಭೂಷಣ್, ಪದ್ಮಶ್ರೀ, ನೆಹರೂ ಪ್ರಶಸ್ತಿ ಮತ್ತು ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದೆ. (ಏಜೆನ್ಸೀಸ್, ಎಂ.ಎನ್)