ದೇಶಪ್ರಮುಖ ಸುದ್ದಿ

 ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 24492 ಹೊಸ ಕೊರೋನಾ ಪ್ರಕರಣ  ದಾಖಲು;  3 ಕೋಟಿ 29 ಲಕ್ಷ ಲಸಿಕೆ  

ದೇಶ(ನವದೆಹಲಿ)ಮಾ.16:- ದೇಶದಲ್ಲಿ ಮಾರಕ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 24 ಸಾವಿರ 492 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಅದೇ ವೇಳೆ ನಿನ್ನೆ ಈ ಸಾಂಕ್ರಾಮಿಕ ರೋಗದಿಂದ 131 ಜನರು ಸಾವನ್ನಪ್ಪಿದ್ದಾರೆ. ನಿನ್ನೆ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದುವರೆಗೆ ದೇಶದಲ್ಲಿ ಮೂರು ಕೋಟಿ 29 ಲಕ್ಷ    ಲಸಿಕೆ ನೀಡಲಾಗಿದೆ.

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ  ದೇಶದಲ್ಲಿ ಕೊರೋನದ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಒಂದು ಕೋಟಿ 14 ಲಕ್ಷ 9 ಸಾವಿರ 831 ಕ್ಕೆ ತಲುಪಿದೆ. ಈ ಪೈಕಿ ಒಂದು ಲಕ್ಷ 58 ಸಾವಿರ 856 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ಎರಡು ಲಕ್ಷ 23 ಸಾವಿರ 432 ಕ್ಕೆ ಏರಿದೆ. ಅದೇ ವೇಳೆ ಬಿಡುಗಡೆಯಾದ ಒಟ್ಟು ಪ್ರಕರಣಗಳ ಸಂಖ್ಯೆ ಒಂದು ಕೋಟಿ 10 ಲಕ್ಷ 27 ಸಾವಿರ 543. ನಿನ್ನೆ  20 ಸಾವಿರ 191 ಜನರು ಗುಣಮುಖರಾಗಿದ್ದಾರೆ. ಈವರೆಗೆ ದೇಶದಲ್ಲಿ ಮೂರು ಕೋಟಿ 29 ಲಕ್ಷ 47 ಸಾವಿರ 432 ಹೆಚ್ಚು   ಲಸಿಕೆ  ಹಾಕಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: