ಮೈಸೂರು

ಮೈಮುಲ್ ಚುನಾವಣೆ ಮತದಾನದ ವೇಳೆ ಕೊರೋನಾ ನಿಯಮ ಉಲ್ಲಂಘನೆ !

ಮೈಸೂರು,ಮಾ.16:- ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ  ಭೀತಿ ಎದುರಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತನೆ ನಡೆಸಿದ್ದರೆ ಮೈಸೂರಿನಲ್ಲಿಂದು ಮೈಮುಲ್ ಚುನಾವಣೆಯ ಮತದಾನದ ವೇಳೆ  ಸಹಕಾರಿ ಸದಸ್ಯರು ಕೊರೋನಾ ಇರುವುದನ್ನೇ ಮರೆತಂತಿದೆ.

ಪ್ರತಿಷ್ಠೆಯ ಚುನಾವಣೆಗಾಗಿ ಕೊರೋನಾ ನಿಯಮ ಉಲ್ಲಂಘನೆಯಾಗುತ್ತಿರುವುದು ಕಂಡು ಬಂದಿದೆ. ಅಧಿಕಾರ ಪ್ರತಿಷ್ಠೆ ನಡುವೆ ಕೊರೋನಾ ಭೀತಿಯನ್ನೇ  ಸಹಕಾರಿ ಸದಸ್ಯರು ಮರೆತಂತಿದೆ. ಸ್ವತ: ಅಭ್ಯರ್ಥಿಗಳಿಂದಲೂ ಕೊರೋನಾ ನಿಯಮ‌ ಉಲ್ಲಂಘನೆಯಾಗಿದೆ. ಮಾಸ್ಕಂತೂ  ಇಲ್ಲವೇ ಇಲ್ಲ, ಸಾಮಾಜಿಕ ಅಂತರ ಕೂಡ ಮಾಯವಾಗಿದೆ. ಗುಂಪು ಗುಂಪಾಗಿ ನಿಂತು ಪ್ರಚಾರ ನಡೆಸಿದ್ದು, ಮತದಾರರ ಮನವೋಲಿಸಲು ಕೈಮುಟ್ಟಿ ಮತಯಾಚನೆ ಮಾಡುತ್ತಿರುವುದು ಕಂಡು ಬಂದಿದೆ.  ಚುನಾವಣೆಯ ನಂತರ ಕೊರೋನಾ ಸ್ಪೋಟದ ಆತಂಕ ಮನೆ ಮಾಡಿದ್ದು, ಮೈಮುಲ್ ಚುನಾವಣೆಗಾಗಿ ಕೊರೋನಾ ಇರೋದನ್ನೇ ಮರೆತು ಅಪಾಯತಂದುಕೊಳ್ಳುತ್ತಿದ್ದಾರಾ ಎಂಬ ಆತಂಕ ಮನೆ ಮಾಡಿದೆ. (ಕೆ.ಎಸ್,ಎಸ್.ಎಚ್)

ಇದನ್ನೂ ಓದಿ

http://ಮೈಮುಲ್ ಚುನಾವಣೆ ಹಿನ್ನೆಲೆ : ತಂದೆಯ ಪ್ರತಿಷ್ಠೆ ಉಳಿಸಲು ಖುದ್ದು ಅಖಾಡಕ್ಕಿಳಿದ ಹರೀಶ್ ಗೌಡ

 

Leave a Reply

comments

Related Articles

error: