ಮೈಸೂರು

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಬಗ್ಗೆ ಅರಿವು ಮೂಡಿಸಲು ಇಂದಿನಿಂದ ಜಾಥಾ

ಮೈಸೂರು, ಮಾ .16 :- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುವ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಜಾಥಾಕ್ಕೆ ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಟಿ.ಅಮರ್ ನಾಥ್   ಚಾಲನೆ ನೀಡಿದರು.

ಒಟ್ಟು 7 ಕಲಾತಂಡಗಳಾದ ಆಂಜನೇಯ ಕಲಾ ಸಂಘ, ಅನಿಕೇತನ ಕಲಾತಂಡ, ಅರಿವು ಸಾಂಸ್ಕೃತಿಕ ಕಲಾತಂಡ, ಸ್ಪಂದನಾ ಸಾಂಸ್ಕೃತಿಕ ಕಲಾ ತಂಡ, ನನ್ನವ್ವ ಸಾಂಸ್ಕೃತಿಕ ಕಲಾಸಂಘ, ಸಂಭ್ರಮ ಕಲಾ ಬಳಗ ಮತ್ತು ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಕಲಾತಂಡಗಳು ಮೈಸೂರಿನ 7 ತಾಲ್ಲೂಕುಗಳಾದ ಹುಣಸೂರು, ನಂಜನಗೂಡು, ಹೆಚ್.ಡಿ.ಕೊಟೆ, ಪಿರಿಯಾಪಟ್ಟಣ, ಮೈಸೂರು, ತಿ.ನರಸೀಪುರ ಮತ್ತು ಕೆ.ಆರ್.ನಗರಗಳಲ್ಲಿ ತಲಾ ಎರಡು ದಿನಗಳಂತೆ ಒಟ್ಟು 14ದಿನ ಜಾಗೃತಿ ಮೂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಪಿ.ರವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಪ್ರಾಸದ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಲ್.ರವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮುನೀಂದ್ರಮ್ಮ ಮತ್ತು ಪದ್ಮಾವತಿ, ಜಿಲ್ಲಾ ಸಂಯೋಕರಾದ ಆರ್ಯ ಸೇರಿದಂತೆ ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: