ಮೈಸೂರು

ಕುಮಾರಸ್ವಾಮಿ ಅವರನ್ನು ಸಹಕಾರಿ ಕ್ಷೇತ್ರಕ್ಕೆ ಕರೆತರಬಾರದಿತ್ತು : ಜಿ.ಟಿ.ದೇವೇಗೌಡ ಹೇಳಿಕೆಗೆ ಸಾ.ರಾ.ಮಹೇಶ್ ಗರಂ

ಮೈಸೂರು, ಮಾ.17:-   ಕುಮಾರಸ್ವಾಮಿ ಅವರನ್ನು ಸಹಕಾರಿ ಕ್ಷೇತ್ರಕ್ಕೆ ಕರೆತರಬಾರದಿತ್ತು ಎಂದಿರುವ ಶಾಸಕ  ಜಿ.ಟಿ ದೇವೇಗೌಡ ಹೇಳಿಕೆಗೆ ಶಾಸಕ   ಸಾರಾ ಮಹೇಶ್ ಗರಂ ಆಗಿದ್ದಾರೆ

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ಭಾಗವನ್ನು ಮತದಾನ ಮಾಡಬಹುದು ಎಂದು ತಂದವರು ಯಾರು? ಸಬ್ ಡಿವಿಷನ್ ಎಂದು ತಂದು ಮತದಾನಕ್ಕೆ ಆದ್ಯತೆ ಕೊಟ್ಟವರು ಯಾರು? ಅಂದು ನಿಮಗೆ ಅದು ನೆನಪಿಗೆ ಬರಲಿಲ್ಲವೇ?
ಕೆಲ ಮೈಮುಲ್ ಅಭ್ಯರ್ಥಿಗಳಿಗೆ ನಮ್ಮ ಟೀಂಗೆ ಬಂದರೆ ಮಾತ್ರ ಟಿಕೆಟ್ ಕೊಡ್ತಿನಿ ಎಂದವರು ಯಾರು? ಪಿರಿಯಾಪಟ್ಟಣದ ಶಾಸಕರ ಮಗ ಹಾಗೂ ಮತ್ತೊಬ್ಬ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೀರಾ ಇಲ್ಲ. ಆ ಶಾಸಕರು ನಮ್ಮ ಜೆಡಿಎಸ್ ಪಕ್ಷದಿಂದ ಗೆದ್ದವರಲ್ಲವೇ.?
ನಾಲ್ಕು ಕಡೆಗಳಲ್ಲಿ ಜೆಡಿಎಸ್ ಬೆಂಬಲಿತರಿಗೆ ನೀವು ಟಿಕೆಟ್ ಕೊಡಲಿಲ್ಲ. ಮೈಸೂರು ಹಾಗೂ ಹುಣಸೂರು ಸಬ್ ಡಿವಿಷನ್ ‌ನಲ್ಲಿ ಬಿಜೆಪಿ ಕಾಂಗ್ರೆಸ್, ನೀವೂ ಮೂರು ಜನ ಒಂದಾದ್ರಿ. ಆದರು ಇಲ್ಲಿ ರಾಜಕಾರಣ ಬೇಡ ಅಂತ ಹೇಳ್ತಿರಾ.? ಆದರು ಕುಮಾರಸ್ವಾಮಿ ಅವರನ್ನ ಇಲ್ಲಿಗೆ ತರಬಾರದಿತ್ತು ಅಂತೀರಾ?  ಎಂದು ಶಾಸಕ ಜಿ.ಟಿ.ದೇವೇಗೌಡ ವಿರುದ್ಧ  ಆಕ್ರೋಶ ವ್ಯಕ್ತ ಪಡಿ ಸಿದರು.

ಆಲದ ಮರ ಎಂದಿದ್ದ ಜಿ‌.ಟಿ.ದೇವೇಗೌಡರ ವಿರುದ್ಧ ಕಿಡಿಕಾರಿದ ಅವರು  ಆಲದ ಮರ ಯಾವ ಮರವನ್ನು ಬಿಡುವುದಿಲ್ಲ. ಹೀಗೆಯೇ ಜಿಟಿ ದೇವೇಗೌಡ ಕೂಡ. ಹೀಗಾಗಿ ಆಲದ ಮರದ ಬಿಟ್ಟು ಬೇರೆ ಸಸಿಗಳನ್ನು ನೆಡುವಂತಹ ಕೆಲಸ ಆಗಬೇಕು. ಮೈಸೂರು ಜಿಲ್ಲೆಯಲ್ಲಿ ಆಲದಮರದ ಬದಲು ಬೇರೆ ಗಿಡಗಳನ್ನು ನೆಡುತ್ತಿದ್ದೇವೆ. ಜನತಾದಳವನ್ನು ಹಣಿಯಲು ಪಕ್ಷಗಳ ಜೊತೆ ಹೊಂದಾಣಿಕೆ‌ ಮಾಡಿಕೊಂಡಿದ್ದೀರಿ. ನಾನು ಆಲದ ನನ್ನನ್ನು ಕಡಿಯಲು ಆಗಲ್ಲ‌ ಅಂತೀರಿ, ನಾವು ನಿಮ್ಮನ್ನ ಕಡಿತಿವಿ ಎಂದು ಎಲ್ಲೂ ಹೇಳಿಲ್ಲ. ಆಲದಮರದ ಕೆಳಗೆ ಯಾವ ಗಿಡ, ಮರಗಳೂ ಬೆಳೆಯುವುದಿಲ್ಲ.  ಆದ್ದರಿಂದ ತನ್ನ ಬೇರಿನ ಜತೆಯಲ್ಲೇ ಬೇರೆ ಮರದ ಬೇರುಗಳನ್ನು ಬೆಳೆಸುವ ಮರಗಳನ್ನು ನೆಡಬೇಕಿದೆ.  ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ತಜ್ಞರ ಸಲಹೆ ಕೇಳುತ್ತಿದ್ದೇವೆ.  ಮಾವು, ಬೇವು, ಹೊಂಗೆ, ಗಂಧದ ಮರ ನೆಡುತ್ತಿದ್ದೇವೆ. ಗಿಡ ನೆಡುವ ಪ್ರಕ್ರಿಯೆ ಶುರು ಮಾಡಿದ್ದೇವೆ. ಆಲದಮರವನ್ನು ಜನರೇ ನೋಡಿಕೊಳ್ತಾರೆ ಎಂದು ಟಾಂಗ್ ನೀಡಿದರು.

ರಾಷ್ಟ್ರಕ್ಕೆ ಹೆಚ್.ಡಿ.ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಮೈಸೂರಿಗೆ ಜಿ.ಟಿ.ದೇವೇಗೌಡ ಅಂತ ನಾನು ಹೇಳಿದ್ದೇನೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೈಮುಗಿದು  ಕೇಳಿಕೊಂಡೆ. ನೀವು ಆಕ್ಟಿವ್ ಆಗಿರದ ಹಿನ್ನಲೆ,ನಾನು ಓಡಾಟ ಮಾಡಿದ್ದೆ ಅಷ್ಟೇ.ನಾನು ಕೆ.ಆರ್.ನಗರ ಬಿಟ್ಟು ಎಲ್ಲೂ ಹೋಗಲ್ಲ ಅಂತ ಹೇಳಿದ್ದೆ. ನನ್ನ ಮೇಲೆ ನಂಬಿಕೆ ಇಲ್ದೆ ಇದ್ರೆ ಚಾಮುಂಡಿ ಬೆಟ್ಟಕ್ಕೆ ಬನ್ನಿ ಆಣೆ ಮಾಡ್ತೀನಿ ಅಂತ ಕರೆದೆ. ನಾನು ನಿಮಗೆ ಏನು ಮಾಡಿದ್ದೆ. ನನ್ನ ಮೇಲೆ ಯಾಕೆ ನಿಮಗೆ ಇಷ್ಟು ದ್ವೇಷ ಎಂದು ಪ್ರಶ್ನಿಸಿದರು.

ನನ್ನ ಹತ್ತಾರು ಬಾರಿ ಟೀಕೆ ಮಾಡಿದ್ರೂ ನಾನು, ಅವರನ್ನು ನಮ್ಮ ನಾಯಕರು ಎಂದಿದ್ದೇನೆ. ನನ್ನ ಶಕುನಿ, ಮಂಥರೆ ಅಂತಾರೆ. ಶಕುನಿ ಇಲ್ಲ ಅಂದಿದ್ರೆ ಮಹಾಭಾರತ ನಡೆಯುತ್ತಿತ್ತಾ? ಧರ್ಮರಾಜ್ಯ ಸ್ಥಾಪನೆ ಆಗುತ್ತ ಇತ್ತಾ? ಮಂಥರೆ ಇಲ್ಲ ಅಂದಿದ್ರೆ ರಾಮಾಯಣ ನಡೆಯುತ್ತಿತ್ತಾ? ರಾಮ ರಾಜ್ಯ ಸ್ಥಾಪನೆ ಆಗುತ್ತಿತ್ತಾ? ಸಾ.ರಾ.ಗೆ ಶಕುನಿ ಎಂದ ಜಿಟಿಡಿ ವಿರುದ್ಧ   ವಾಗ್ದಾಳಿ ನಡೆಸಿದರು.

ಪದೇ ಪದೇ ನಮ್ಮ ಮೇಲೆ ಮಾತನಾಡಿದ್ರೆ ನಾವು ಎಷ್ಟು ಸಹಿಸಿಕೊಳ್ಳೋದು. ನೀನು ಗೆದ್ದಿರೋದು 1800 ಮತ, ನಾನು ಮುಖ್ಯಮಂತ್ರಿ ಸೋಲಿಸಿದ್ದೇನೆ ಅಂತಾರೆ. ಅದು ನಿಮ್ಮ ಶಕ್ತಿ ಅಲ್ಲ, ಜನತಾದಳ ಶಕ್ತಿ. ನಿಮ್ಮ ಬಗ್ಗೆ ನನಗೆ ಗೌರವ ಇದೆ, ನೀವು ಎಷ್ಟೇ ಸಾರಾ ಬಗ್ಗೆ ಮಾತನಾಡಿದ್ರೂ ಕೂಡ ನಾನು ನಿಮ್ಮ ಬಗ್ಗೆ ಮಾತನಾಡಲ್ಲ ಅಂತ ಹೇಳಿದ್ದೆ. ಇದಕ್ಕೆ ಕುಮಾರಸ್ವಾಮಿ ಸೇರಿ ಹಲವಾರು ಮಂದಿ ಮುಂದೆಯೇ ಹೇಳಿದ್ದೆ ಎಂದರು.

ನಾನು ರಾಜಕೀಯ ನಿವೃತ್ತಿ ಆಗ್ತಿನಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ. ಯಾಕಾಗಿ ನನ್ನನ್ನ ವಿರೋಧ ಮಾಡ್ತಿರಾ. ನೀವು ಬರುವುದಾದರೆ ನಾನು ಪಾರ್ಟಿ ಬಿಡ್ತಿನಿ‌. ಇನ್ನೆರಡು ವರ್ಷ ಆದಮೇಲೆ ನಾನೆ ಸಾರ್ವಜನಿಕ ಜೀವನದಿಂದ ದೂರ ಇರ್ತಿನಿ. ನೀವು ಬೇಕಿದ್ರೆ ಬಂದು ಪಾರ್ಟಿ ಕಟ್ಟಿ ಎಂದು ಆಹ್ವಾನಿಸಿದರು.

ನಿಮ್ಮ ಕಾಲಿಗೆ ಬಿದ್ದು ಕೇಳಿಕೊಂಡನಲ್ಲ. ಗೆಸ್ಟ್ ಹೌಸ್‌ನಲ್ಲಿ ನಿಮ್ಮ‌ ಕಾಲಿಗೆ ಬಿದ್ದಿದ್ದೆನಲ್ಲ. ಯಾಕೇ ನನ್ನ ಮೇಲೆ ಇಷ್ಟು ಕೋಪ. ನೀವು ಪಾರ್ಟಿ ಬಿಟ್ಟಿಲ್ಲ ಅಂತೀರಲ್ಲ ಹಾಗಾದ್ರೆ ಬನ್ನಿ ನೇತೃತ್ವ ವಹಿಸಿಕೊಳ್ಳಿ. ಯಾಕೆ ಪಾರ್ಟಿಯಿಂದ ದೂರ ಇದ್ದೀರಾ ನೀವು ಎಂದು ಪ್ರಶ್ನಿಸಿದರು. ಒಬ್ಬರು ಚಾಮುಂಡಿಬೆಟ್ಟದಲ್ಲಿ ಕಣ್ಣಿರಾಕಿಸಿ ಅನುಭವಿಸುತ್ತಿದ್ದಾರೆ. ಇವತ್ತು ನೀವು ಚಾಮುಂಡಿಬೆಟ್ಟದಲ್ಲಿ ನನ್ನ ಬಗ್ಗೆ ಮಾತನಾಡಿದ್ದೀರಿ. ನನ್ನ‌ ನಿಷ್ಠೆ ಏನೆಂದು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾರೆ ಎಂದರು.

ನೀವು ಆಕ್ಟಿವ್ ಆದ್ರೆ ನಾವೇ ನಿಮ್ಮ ಹಿಂದೆ ಇರ್ತಿವಿ‌. ನೀವು ಬನ್ನಿ ನಾವು ಬರ್ತಿವಿ. ನೀವು ಪಾಲಿಕೆಯಲ್ಲಿ ಓಟ್ ಹಾಕಲ್ಲ. ವಿಧಾನ ಪರಿಷತ್ ಅಲ್ಲಿ ಸವದಿಗೆ ಓಟ್ ಹಾಕ್ತಿರಾ. ಡೈರಿ ಚುನಾವಣೆಯಲ್ಲಿ ನಿಮ್ಮ ನಡೆ ಬಗ್ಗೆ ಅನುಮಾನ ಬಂದು ನಾವು ಪಕ್ಷಕ್ಕಾಗಿ ಟೀಂ ಮಾಡಿಕೊಂಡೆವು. ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅನ್ನೋದೆ ನಿಮ್ಮ ಉದ್ದೇಶನಾ? ಹೇಳಿ ನೀವು ಏನು ಮಾಡಲು ಹೊರಟಿದ್ದೀರಿ‌ ಎಂದು ಪ್ರಶ್ನಿಸಿದರು.

ನಿಮಗೆ, ನಿಮ್ಮ ಟೀಮ್‌ ಗೆ ಅಕ್ರಮ ನೇಮಕಾತಿಯ ಹಣ ಇತ್ತು.  ನಮ್ಮ ಬಳಿ ಏನಿತ್ತು ? ಕೇವಲ ಕುಮಾರಸ್ವಾಮಿ ಅವರ ಶಕ್ತಿ ಮೇಲೆ ಚುನಾವಣೆ ಮಾಡಿದ್ದೇವೆ.  ಈಗ ಗಿಡ ನೆಡಲು ಶುರು ಮಾಡಿದ್ದೇವೆ. ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಸಲುವಾಗಿ ಸ್ಪರ್ಧೆ ಮಾಡಿದ್ದೇವೆ.  ಜೆಡಿಎಸ್ ಚಿಹ್ನೆಯೇ ನಮಗೆ ದೇವರು.  ಒಂದು ಸರ್ಕಾರ, ಮತ್ತೊಂದು ರಾಷ್ಟ್ರೀಯ ಪಕ್ಷ, ಸಹಕಾರ ಧುರೀಣರು ಸೇರಿದರು.  ನಾವು ಮೇಯರ್ ಚುನಾವಣೆ ಬಳಿಕ ಮೈಮುಲ್ ಬಗ್ಗೆ ಗಮನ ಹರಿಸಿದೆವು.  ಮೂರು ಸ್ಥಾನ ಗೆದ್ದಿದ್ದೇವೆ. ಒಂದು ವೇಳೆ ನಾವು ಸ್ಪರ್ಧಿಸದೆ ಇದ್ದರೆ ಅವಿರೋಧ ಆಯ್ಕೆ ಆಗುತ್ತಿತ್ತು. ನಿಮ್ಮ ನಾಗಾಲೋಟ ತಡೆಯಲು ನಾವು ಯಶಸ್ವಿಯಾಗಿದ್ದೇವೆ ಎಂದರು.

50 ವರ್ಷದ ರಾಜಕೀಯದಲ್ಲಿ ನೀವು ಎಷ್ಟು ಸಾರಿ ಶಾಸಕರಾಗಿದ್ದೀರಿ. ಲೆಕ್ಕ ಹಾಕಿದ್ರೆ ನಿಮಗಿಂತ ನಾನೇ 6 ತಿಂಗಳು ಹೆಚ್ಚು ಕಾಲ ಶಾಸಕನಾಗಿದ್ದೇನೆ. 6 ಬಾರಿ ಗೆದ್ದರೂ ಕೆಲವರು ಮಂತ್ರಿ ಆಗಿಲ್ಲ. ನಿಮ್ಮನ್ನು ಜೆಡಿಎಸ್‌ ಎರಡು ಬಾರಿ ಮಂತ್ರಿ ಮಾಡಿದೆ. ಅದಕ್ಕಿಂತ ಇನ್ನೆನು ಬೇಕು ನಿಮಗೆ ಎಂದು ಪ್ರಶ್ನಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: