ಮೈಸೂರು

ನಂಜನಗೂಡು ರಥೋತ್ಸವ ನಡೆಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು.ಮಾ.17:- ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ಕಂಠೇಶ್ವರ ಗೌತಮ ಪಂಚ ಮಹಾರಥೋತ್ಸವವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂ ರಿ ಅವರು ರದ್ದುಗೊಳಿಸಿ ಆದೇಶ. ಹೊರಡಿಸಿದ್ದಾರೆ.

ಏತನ್ಮಧ್ಯೆ ಗ್ರಾಮಸ್ಥರು ದೇವಸ್ಥಾನದ ಎದುರು ರಥದ ಬಳಿ ಪ್ರತಿಭಟನೆ ನಡೆಸಿದರು. ಕಳೆದ ಬಾರಿಯೂ ರಥೋತ್ಸವ ಆಚರಣೆ ನಡೆದಿಲ್ಲ. ಬೇರೆ ಕಡೆಗಳಲ್ಲಿ ರಥೋತ್ಸವ ಆಚರಣೆಗೆ ಅನುಮತಿ ನೀಡುತ್ತೀರಿ, ನಮಗೂ ರಥೋತ್ಸವ ಆಚರಣೆ ಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು. ನಿನ್ನೆ  ರಾತ್ರಿ ಸಡನ್ನಾಗಿ ಆದೇಶ ಹೊರಡಿಸಿದ್ದೀರಿ, ಇದರ ಉದ್ದೇಶ ಏನಿದೆ? ಪ್ರತಿವರ್ಷವು ರಥೋತ್ಸವ ರದ್ದು ಗೊಳಿಸುವುದು ಸರಿಯಲ್ಲ. ಅದು ನಮ್ಮ ನಂಬಿಕೆ. ನೆರವೇರಲು ಅವಕಾಶ ಮಾಡಿ ಕೊಡಿ ಎಂದು ಒತ್ತಾಯಿಸಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: