
ಪ್ರಮುಖ ಸುದ್ದಿಮನರಂಜನೆ
ಪುನೀತ್ ರಾಜ್ ಕುಮಾರ್ ಅಭಿನಯದ `ಜೇಮ್ಸ್’ ಸಿನಿಮಾದ ಪೋಸ್ಟರ್ ರಿಲೀಸ್
ಬೆಂಗಳೂರು,ಮಾ.16-ನಟ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ `ಜೇಮ್ಸ್’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ಪೋಸ್ಟರ್ ನಲ್ಲಿ ಅಪ್ಪು ಗನ್ ಹಿಡಿದು ನಿಂತಿದ್ದಾರೆ. ಅದಕ್ಕೆ ತಕ್ಕ ಹಾಗೆ, ‘ಇವರೊಂಥರ ಗನ್ ಇದ್ದಂಗೆ ಟ್ರಿಗರ್ ಅಷ್ಟೇ ಸೈಲೆಂಟ್ ಫೈರ್ ಅಷ್ಟೇ ವೈಲೆಂಟ್’ ಎಂಬ ಡೈಲಾಗ್ ಕೂಡ ಪೋಸ್ಟರ್ ನಲ್ಲಿದೆ.
ಪೋಸ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಖಡಕ್ ಆಗಿ ಕಾಣಿಸಿದರೂ, ‘ಜೇಮ್ಸ್’ ಚಿತ್ರದಲ್ಲಿ ಅವರ ಪಾತ್ರವೇನು ಎಂಬ ಸೀಕ್ರೆಟ್ ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಆದರೆ, ಇದುವರೆಗೂ ಮಾಡಿರದ ಪಾತ್ರದಲ್ಲಿ ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ ಎಂಬುದು ಮಾತ್ರ ಪಕ್ಕಾ.
ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ‘ಜೇಮ್ಸ್’ ಚಿತ್ರದ ಕೆಲ ಭಾಗಗಳ ಚಿತ್ರೀಕರಣ ಮುಗಿದಿದೆ. ‘ಯುವರತ್ನ’ ಬಿಡುಗಡೆಯಾದ ಬಳಿಕ ಮತ್ತೆ ಶೂಟಿಂಗ್ ಶುರುವಾಗಲಿದೆ. ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿಯೇ ಶೂಟಿಂಗ್ ನಡೆಯಲಿದೆ. ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಪ್ರಿಯಾ ಆನಂದ್, ಅನು ಪ್ರಭಾಕರ್, ಆದಿತ್ಯ ಮೆನನ್, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಬಳಗ ಇದೆ. ‘ಜೇಮ್ಸ್’ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕಿಶೋರ್ ಪಾತಿಕೊಂಡ ಬಂಡವಾಳ ಹೂಡಿದ್ದಾರೆ. (ಎಂ.ಎನ್)