ಮೈಸೂರು

ಮಾ.19ರಿಂದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ಜಾತ್ರೆ; ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ

ಮೈಸೂರು,ಮಾ .17 :- ಕೊವೀಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ ಮಾರ್ಚ್ 19 ರಿಂದ 30ರವರೆಗೆ ಜರುಗಲಿರುವ 2021ನೇ ಸಾಲಿನ ದೊಡ್ಡ ಜಾತ್ರೆಯನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ ಸರಳವಾಗಿ ನಡೆಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶಿಸಿದ್ದಾರೆ.
ಮಾರ್ಚ್ 26 ರಂದು ನಡೆಯಬೇಕಿದ್ದ ಗೌತಮ ಪಂಚಮಹಾ ರಥೋತ್ಸವವನ್ನು ರದ್ದುಗೊಳಿಸಿದ್ದು, ಬದಲಾಗಿ ದೇವಾಲಯದ ಹೊರ ಆವರಣದಲ್ಲಿ ಅರ್ಚಕರು, ಸಿಬ್ಬಂದಿಗಳು, ಸ್ಥಳೀಯರ ಸಮ್ಮುಖದಲ್ಲಿ ಸರ್ಕಾರದ ಆದೇಶದಂತೆ ಕೋವಿಡ್-19 ನಿಯಮಗಳನ್ನು ಪಾಲಿಸಿ ಸರಳ ಸಾಂಕೇತಿಕ, ಸಂಪ್ರದಾಯಕವಾಗಿ ಚಿಕ್ಕ ತೇರಿನಲ್ಲಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ.
ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಮತ್ತು ನಂಜನಗೂಡಿನ ಸ್ಥಳೀಯ ಗ್ರಾಮಸ್ಥರನ್ನು ಹೊರತು ಪಡಿಸಿ, ಜಾತ್ರೆ ನಡೆಯುವ ದಿನಗಳಂದು ದೇವಾಲಯಕ್ಕೆ ಹೊರ ರಾಜ್ಯ, ಹೊರ ಜಿಲ್ಲೆ ಮತ್ತು ಹೊರ ತಾಲ್ಲೂಕುಗಳಿಂದ ಬರುವ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಪ್ರಟಕಣೆಯಲ್ಲಿ ತಿಳಿಸಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: