ಕರ್ನಾಟಕಪ್ರಮುಖ ಸುದ್ದಿ

ಸಾಲಬಾಧೆಗೆ ಯುವ ರೈತ ಆತ್ಮಹತ್ಯೆ

ರಾಜ್ಯ(ಮಂಡ್ಯ)ಮಾ.18:- ಸಾಲಬಾಧೆ ತಾಳಲಾರದೇ ಯುವ ರೈತ ಾತ್ಮಹತ್ಯೆ ಮಾಡಿಕೊಮಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದ ಉಮೇಶ್(34) ಎಂದು ಗುರುತಿಸಲಾಗಿದೆ. ಮೃತರಿಗೆ ಹೆಂಡತಿ ರಾಣಿ ಮತ್ತು ಎಂಟು ಮತ್ತು ನಾಲ್ಕು ವರ್ಷದ ಇಬ್ಬರೂ ಹೆಣ್ಣು ಮಕ್ಕಳಿದ್ದಾರೆ.

ಮೃತರು ಧರ್ಮಸ್ಥಳ ಸಂಘಗಳು ಮತ್ತು ಮೈಕ್ರೊಫೈನಾನ್ಸ್ ಗಳಿಂದ ಐದು ಲಕ್ಷ ಮತ್ತು ಕೈ ಸಾಲ ಎರಡು ಲಕ್ಷ ಸಾಲ ಮಾಡಿದ್ದರು. ತಮ್ಮ ಜಮೀನ ಬಳಿಯೇ ವಾಸವಿದ್ದ ಉಮೇಶ್ ಬೆಳೆ ಬೆಳೆಯಲು ಸಾಲ ಪಡೆದಿದ್ದು, ಬೆಳೆದ ಬೆಳೆಗಳು ಕೈ ಸೇರದೆ ನಷ್ಟ ಅನುಭವಿಸಿ ಸಾಲಕ್ಕೆ ಹೆದರಿ ತಮ್ಮ ಜಮೀನಿನ ಬಳಿ ಇರುವ ಹೊಂಗೆ ಮರಕ್ಕೆ ನೇಣು ಬಿಗಿಕೊಂಡಿದ್ದು, ಅಲ್ಲೇ ಪಕ್ಕದಲ್ಲಿ ಇದ್ದ ರೈತರು ನೋಡಿ ಕೂಡಲೇ ಚಿಕಿತ್ಸೆಗೆ ಶ್ರವಣಬೆಳಗೊಳದ ಆಸ್ಪತ್ರೆಗೆ ಸೇರಿಸಿದ್ದರು.

ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ   ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: