
ಮೈಸೂರು
ಪ್ರೊ. ಮನೋನ್ಮಣಿ ಎಂ.ಎಸ್ ಅವರಿಗೆ 2020 ನೇ ಸಾಲಿನ “ಸಾವಿತ್ರಿ ಬಾಯಿ ಫುಲೆ ಫೆಲೋಷಿಪ್ ರಾಷ್ಟ್ರೀಯ ಪ್ರಶಸ್ತಿ”
ಮೈಸೂರು,ಮಾ.18:- ಪ್ರೊ. ಮನೋನ್ಮಣಿ ಎಂ.ಎಸ್, ಮುಖ್ಯಸ್ಥರು, ಮನೋವಿಜ್ಞಾನ ವಿಭಾಗ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು ಇವರು ಭಾರತದ ದಮನಿತರು ಹಾಗೂ ತುಳಿತಕ್ಕೊಳಗಾದವರ ಸಾಮಾಜಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ 13 ಮತ್ತು 14 ಮಾರ್ಚ್ 2021 ರಂದು ದೆಹಲಿಯ ಪಂಚಶೀಲ ಆಶ್ರಮದಲ್ಲಿ ಏರ್ಪಡಿಸಿದ್ದ ದಲಿತ ಬರಹಗಾರರ 36 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ “ವಿರಾಂಗನ ಸಾವಿತ್ರಿ ಬಾಯಿ ಫುಲೆ ಫೆಲೋಷಿಪ್ ರಾಷ್ಟ್ರೀಯ ಪ್ರಶಸ್ತಿ – 2020” ಪುರಸ್ಕಾರವನ್ನು ನೀಡಿ ಗೌರವಿಸಿರುತ್ತಾರೆ.
ಸಂಗಪ್ರಿಯ ಗೌತಮ್, ಮಾಜೀ ಕೇಂದ್ರ ಸಚಿವರು, ಭಾರತ ಸರ್ಕಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಸಚಿವರಾದ ರಾಜೇಂದ್ರಪಾಲ್ ಗೌತಮ್, ಕೇಂದ್ರದ ಮಾಜಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾದ ಸತ್ಯನಾರಾಯಣ ಜತಿಯಾ, ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ರೈಲ್ವೇ ಬೋರ್ಡ್ನ ಅಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ರಮೇಶ್ ಚಂದ್ರ ರತ್ನ, ಲೋಕಸಭಾ ಸದಸ್ಯರಾದ ಹೇಮಂತ್ ಗೋಡ್ಸೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)