ಮೈಸೂರು

ಚಿನ್ನದ ವ್ಯಾಪಾರಿ ಕಾರು ತಡೆದು ಹಲ್ಲೆ ನಡೆಸಿ ದರೋಡೆ : ಹುಣಸೂರಿನಲ್ಲಿ ಘಟನೆ

ಮೈಸೂರು,ಮಾ.19:-  ಯಾರೋ ದುಷ್ಕರ್ಮಿಗಳು ಚಿನ್ನದ ವ್ಯಾಪಾರಿಯೋರ್ವರ  ಕಾರನ್ನು ತಡೆದು ಹಲ್ಲೆ ನಡೆಸಿ ಒಂದು ಕೋಟಿ ರೂ ಹಣವನ್ನು  ದರೋಡೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಯಶೋಧರಪುರ ಬಳಿ ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು,  ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಬಾನೂರಿನ ಸ್ವಪ್ನ ಜ್ಯೂವೆಲರ್ಸ್  ಮಾಲೀಕ, ಚಿನ್ನದ ವ್ಯಾಪಾರಿ ಸುರಾಜ್ ಹಣ ಕಳೆದುಕೊಂಡವರಾಗಿದ್ದಾರೆ. ಇವರು   ಕೇರಳಕ್ಕೆ ತೆರಳುತ್ತಿದ್ದರು. ಈ ಮಧ್ಯೆ  ಮೂತ್ರವಿಸರ್ಜನೆಗೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದರು. ಈ ವೇಳೆ ದುಷ್ಕರ್ಮಿಗಳು ಸುರಾಜ್ ಮೇಲೆ ಹಲ್ಲೆ ನಡೆಸಿ ಚಿನ್ನ ಮಾರಿ ಕೊಂಡೊಯ್ಯುತ್ತಿದ್ದ ಒಂದು ಕೋಟಿ ರೂ ಹಣವನ್ನ ಕಿತ್ತು ಪರಾರಿಯಾಗಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: