ಕರ್ನಾಟಕಪ್ರಮುಖ ಸುದ್ದಿ

ಸಚಿವ ಸುಧಾಕರ್ ಅವರ ಗನ್‌ಮ್ಯಾನ್‌ ಹಾಗೂ ಖಾಸಗಿ ಡ್ರೈವರ್ ನಡುವೆ ಮಾರಾಮಾರಿ

ಬೆಂಗಳೂರು,ಮಾ.19-ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಗನ್‌ಮ್ಯಾನ್‌ ಹಾಗೂ ಖಾಸಗಿ ಡ್ರೈವರ್ ಹೊಡೆದಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಸಚಿವರ ಮನೆ ಮುಂದೆಯೇ ನಡುರಸ್ತೆಯಲ್ಲಿ ಸಚಿವರ ಗನ್‌ಮ್ಯಾನ್‌ ತಿಮ್ಮಯ್ಯ ಮತ್ತು ಡ್ರೈವರ್ ಸೋಮಶೇಖರ್‌ ಹೊಡೆದಾಡಿಕೊಂಡಿದ್ದಾರೆ.

ಗನ್‌ಮ್ಯಾನ್ ತಿಮ್ಮಯ್ಯ ಅವರು ಗುರುವಾರ ಅಂಗವಿಕಲನಿಗೆ ಹೊಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ವಿಚಾರವನ್ನು ಸೋಮಶೇಖರ್ ಅವರು ಸಚಿವರಿಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗನ್ ಮ್ಯಾನ್ ತಿಮ್ಮಯ್ಯ, ಡ್ರೈವರ್‌ ಸೋಮಶೇಖರ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಲ್ಲೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್ ಅವರು ಹಲ್ಲೆ ಮಾಡಿರುವ ಗನ್‍ಮ್ಯಾನ್ ತಿಮ್ಮಯ್ಯನನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: