ಮೈಸೂರು

ಅಲ್ಪಸಂಖ್ಯಾತರಿಗೆ ಬಜೆಟ್‌ ನಲ್ಲಿ   1,750   ಕೋಟಿ ರೂ. : ಸಿಎಂ ಗೆ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಕಲೀಂ ಪಾಷಾ ಅಭಿನಂದನೆ

ಮೈಸೂರು,ಮಾ.19:-  ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಸಾಲಿನ ಬಜೆಟ್‌ ನಲ್ಲಿ  ಅಲ್ಪಸಂಖ್ಯಾತರಿಗೆ ಬಜೆಟ್‌ ನಲ್ಲಿ   1,750   ಕೋಟಿ ರೂ. ನೀಡಿದ್ದು, ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ‌ಎಂದು  ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಕಲೀಂ ಪಾಷಾ ಅವರು ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು ನಗರ ಅಲ್ಪಸಂಖ್ಯಾತರ ಅಧ್ಯಕ್ಷರು ಮತ್ತು ಕಾರ್ಯಕರ್ತರು , ನಮ್ಮ ಸಮುದಾಯದ ಎಲ್ಲಾ ಮುಖಂಡರಿಂದ ಯಡಿಯೂರಪ್ಪ ನವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ವೆಸ್ಟ್ ಬೆಂಗಾಲ್‌ ನಲ್ಲಿ ಭಾಷಣ ಮಾಡುವಾಗ ಆಜಾನ್ ಸಮಯದಲ್ಲಿ ಅಲ್ಲಾ ಎಂದು ಕೂಗಿದಾಗ ಪ್ರಧಾನಮಂತ್ರಿಯವರು ಭಾಷಣವನ್ನು ಸ್ವಲ್ಪ ಸಮಯ ನಿಲ್ಲಿಸಿ ಗೌರವ ಸಲ್ಲಿಸಿ ನಂತರ ಭಾಷಣ ಮುಂದುವರಿಸಿದ್ದಾರೆ.  ಆದರೆ ಕೆಲವು ಕಿಡಿಗೇಡಿಗಳು ಇದನ್ನೇ ಅಪಾರ್ಥವಾಗಿ ತಿಳಿದು ವಾಟ್ಸಾಪ್ , ಫೇಸ್‌ ಬುಕ್‌ನಲ್ಲಿ ಇಲ್ಲಸಲ್ಲದ ಆರೋಪಗಳನ್ನು ಹಾಕುತ್ತಿದ್ದಾರೆ.  ಈ ರೀತಿಯ ನಿಂದನೆ ಮಾಡಿದರೆ ನಾವು ಸಹಿಸುವುದಿಲ್ಲ ಎಂದರು.

ನಾವು ಬೆಳಿಗ್ಗೆ 5.30 ಕ್ಕೆ ಅಲ್ಲಾ ಎಂದು ಕೂಗುವ ಸಮಯ . ಈ ಸಮಯದಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ . ನಮಗಲ್ಲದೇ ಬೇರೆ ಜನಾಂಗದವರೂ ಬೆಳಿಗ್ಗೆ ಬೇಗ ಎದ್ದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ . ಹಾಗೆಯೇ ನಮ್ಮ ಪದ್ಧತಿ ಈ ರೀತಿಯಿದೆ . ಬೇರೆ ಎಲ್ಲಾ ಜನಾಂಗದವರು ಬೆಳಿಗ್ಗೆ ಎದ್ದೇಳು ಮಂಜುನಾಥ  ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ.  ಇದು ಬರೀ ದೇವರ ಧ್ಯಾನವಷ್ಟೇ , ನಮ್ಮ ದಿನಚರಿ ಹೀಗೆ ಪ್ರಾರಂಭವಾಗುತ್ತದೆ . ಹಾಗಾಗಿ ದಯವಿಟ್ಟು ಯಾರೂ ತಪ್ಪು ತಿಳಿಯದೆ ಎಲ್ಲರೂ ಒಂದು ಎನ್ನುವ ಭಾವನೆಯಿಂದ ಇರೋಣ ಎಂದು   ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: