ಮೈಸೂರು

ಆಸ್ಪತ್ರೆಯಲ್ಲಿಯೇ ಕೇಕ್ ಕತ್ತರಿಸಿದ ಡಾ.ಮಹದೇವಪ್ಪ ಅಭಿಮಾನಿಗಳು

ಮೈಸೂರು ಜಿಲ್ಲಾ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಾಲೂನೋವಿನ ಸಮಸ್ಯೆಯಿಂದ  ಆಸ್ಪತ್ರೆ  ಸೇರಿರುವುದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ನೋವುಂಟು ಮಾಡಿದೆ.ಯಾಕೆಂದರೆ ಇಂದು ಮಹದೇವಪ್ಪನವರ ಜನ್ಮದಿನ. ಅದರಿಂದ  ಆಸ್ಪತ್ರೆಗೇ ತೆರಳಿ ಅವರ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ.

ಮೈಸೂರಿನ ಕುವೆಂಪುನಗರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರ ಅಭಿಮಾನಿಗಳು ಆಸ್ಪತ್ರೆಯಲ್ಲಿಯೇ ಕೇಕ್ ಕತ್ತರಿಸಿ ಅವರಿಗೆ ತಿನ್ನಿಸುವ  ಮೂಲಕ ಅವರ ಜನ್ಮದಿನವನ್ನು ಆಚರಿಸಿ ಅವರಿಗೆ ಶುಭ ಕೋರಿದರು. ಈ ಸಂದರ್ಭ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ನಂದಿನಿ ಚಂದ್ರಶೇಖರ್, ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: