ಮೈಸೂರು

ನಗರಪಾಲಿಕೆ ಸದಸ್ಯೆ ಜಿ.ರೂಪಾಗೆ ಪಿಎಚ್ ಡಿ ಪದವಿ

ಮೈಸೂರು,ಮಾ.19-ನಗರಪಾಲಿಕೆಯ 53ನೇ ವಾರ್ಡಿನ ಸದಸ್ಯೆ ಜಿ.ರೂಪಾ ಅವರಿಗೆ ಬೆಂಗಳೂರಿನ ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಸಿಕ್ಕಿದೆ.

ಔಷಧ ವಿಜ್ಞಾನ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ `ಜೈವಿಕ ಲಭ್ಯತೆ ವರ್ಧನೆಗಾಗಿ ನೈಸರ್ಗಿಕ ಪಾಲಿಮರ್ ಗಳ ನವೀನ ಮೌಖಿಕ, ಸೂಕ್ಷ್ಮ ಮತ್ತು ಸೂಕ್ಷ್ಮ ಕರ್ಕ್ಯುಮಿನ್ ವಾಹಕಗಳ ವಿನ್ಯಾಸ ಮತ್ತು ಅಭಿವೃದ್ಧಿ’ ವಿಷಯ ಕುರಿತ ಪ್ರಬಂಧಕ್ಕಾಗಿ ರೂಪಾ ಅವರಿಗೆ ಪಿಎಚ್ ಡಿ ಪದವಿ ಲಭಿಸಿದೆ. ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಅವರು ಪಿಎಚ್ ಡಿ ಪದವಿ ಪಡೆದುಕೊಂಡಿದ್ದಾರೆ.

ರೂಪಾ ಅವರು ಮೈಸೂರಿನ ಜೆಎಸ್ಎಸ್ ಫಾರ್ಮಸಿ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಫಾರ್ಮಸಿ ಮತ್ತು ಮಾಸ್ಟರ್ ಇನ್ ಫಾರ್ಮಸಿ, ಫರೂಖಿಯಾ ಫಾರ್ಮಸಿ ಕಾಲೇಜಿನಲ್ಲಿ ಬ್ಯಾಚುಲರ್ ಇನ್ ಫಾರ್ಮಸಿ, ಶಾರದಾವಿಲಾಸ ಫಾರ್ಮಸಿ ಕಾಲೇಜಿನಲ್ಲಿ 14 ವರ್ಷಗಳ ಕಾಲ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಆಚಾರ್ಯ ಅಂಡ್ ಬಿ.ಎಂ.ರೆಡ್ಡಿ ಫಾರ್ಮಸಿ ಕಾಲೇಜಿನಲ್ಲಿ ಫಾರ್ಮಸಿ ಪ್ರೊ.ಡಾ.ರೂಪಾ ಕರ್ಕಿ ಹಾಗೂ ಮೈಸೂರಿನ ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಪ್ರೊ.ಡಾ.ಸಿ.ಜಯಂತಿ ಮಾರ್ಗದರ್ಶನ ಪಡೆದಿದ್ದಾರೆ. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: