ಮೈಸೂರು

ಸಿರಿಧಾನ್ಯ ಕುರಿತು ಅರಿವು ಮೂಡಿಸಲು ಸಿರಿಧಾನ್ಯ ನಡಿಗೆ ಜಾಥಾಕ್ಕೆ ಚಾಲನೆ

ಮೈಸೂರು,ಮಾ.20:- ರಾಷ್ಟ್ರೀಯ ಆಹಾರ ಬದ್ಧತಾ ಅಭಿಯಾನ ಕಾರ್ಯಕ್ರಮವನ್ನಿಂದು ಮೈಸೂರು ನಗರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ  ಸಿರಿಧಾನ್ಯ ನಡಿಗೆ ಜಾಥಾ ಮೂಲಕ ಹಮ್ಮಿಕೊಳ್ಳಲಾಗಿದ್ದು ಜಾಥಾಕ್ಕೆ ಚಾಲನೆ ನೀಡಲಾಯಿತು.

ಭದ್ರತಾ ಯೋಜನೆ ಅಡಿಯಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮದ ಜಾಥಾ ಮೂಲಕ  ಸಿರಿಧಾನ್ಯಗಳ ಕುರಿತು ಕೃಷಿ ಇಲಾಖೆ ಅರಿವು  ಮೂಡಿಸುತ್ತಿದೆ.  ಮನುಷ್ಯನಿಗೆ ಆಹಾರ ಪದ್ಧತಿ ಮತ್ತು ಆರೋಗ್ಯ ಎರಡು ಮುಖ್ಯ,  ಸಿರಿಧಾನ್ಯವನ್ನು ಬಳಸಿ ಆರೋಗ್ಯ ಉತ್ತಮ ರೀತಿಯಲ್ಲಿ ಇರಿಸಿ ಎಂದು ಜಾಥಾದಲ್ಲಿ ಪಾಲ್ಗೊಂಡವರು ಘೋಷಣೆ ಕೂಗಿದರು. ಸಾರ್ವಜನಿಕರಲ್ಲಿ  ಸಿರಿದಾನ್ಯಗಳ ಬಗ್ಗೆ ಹೆಚ್ಚು ಅರಿವು ಇರುವುದರಿಂದ ಇದನ್ನು ಜಾಸ್ತಿ ಬೆಳೆಯಬೇಕು. ವಿಷ ಮುಕ್ತ ಆರೋಗ್ಯವಾದ ಆಹಾರ ಬಳಸುವುದಕ್ಕೆ  ಈ ಒಂದು  ಭಾರತ ಸರ್ಕಾರದ ಎನ್ ಎಫ್ ಎಸ್ ಎಂ  ಯೋಜನೆ ಅಡಿಯಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸೌಂದರ್ಯವುಳ್ಳ ಆಹಾರಕ್ಕೆ ಮಾರುಹೋದ ಮನುಷ್ಯ ನಿಸರ್ಗದತ್ತವಾಗಿ ಪೌಷ್ಠಿಕಾಂಶ ಗುಣ ಹೊಂದಿದ ಸಿರಿಧಾನ್ಯಗಳ ಬಳಕೆಯನ್ನು ನಿರ್ಲಕ್ಷ್ಯಿಸಿದ್ದಾನೆ. ಇದು ಆತನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಸಿರಿಧಾನ್ಯಗಳ ತಿಂಡಿ ತಿನಿಸುಗಳತ್ತ ಜನರ ಗಮನ ಹರಿಯುತ್ತಿದೆ. ಜನರು ಇನ್ನೂ ಹೆಚ್ಚು ಹೆಚ್ಚು ಸಿರಿಧಾನ್ಯಗಳತ್ತ ಒಲವು ತೋರುವಂತಾಗಬೇಕೆಂದು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕೆ.ಪಿ.ತಿಳಿಸಿದರು.

ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಮಹಾಂತೇಶ್   ಇನ್ನಿತರರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: