ಮೈಸೂರು

ವಿಶ್ವ ಕಿಡ್ನಿ ದಿನ ಆಚರಣೆ

ಮೈಸೂರು,ಮಾ.20:-   ಕೆ.ಆರ್. ಆಸ್ಪತ್ರೆಯ ಆವರಣದಲ್ಲಿರುವ ನೆಪ್ಪೋ ಯುರಾಲಜಿ ಸಂಸ್ಥೆ, ಮೈಸೂರು ಘಟಕದ ವತಿಯಿಂದ ವಿಶ್ವ ಕಿಡ್ನಿ ದಿನಾಚರಣೆ ಆಚರಿಸಲಾಯಿತು.

ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಂಜುಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಹಿಮಮಣಿ .ಎಸ್, ಪ್ರಾಧ್ಯಾಪಕರು ಮತ್ತು ಘಟಕದ ಮುಖ್ಯಸ್ಥರು, ನೆಪ್ಪೋಯುರಾಲಜಿ ಘಟಕ ಇವರು ಮಾತನಾಡಿ ನಿರ್ದೇಶಕರಾದ ಡಾ. ಕೇಶವಮೂರ್ತಿ.ಆರ್ ಇವರ ಪರಿಶ್ರಮ ಹಾಗೂ ವಿಶೇಷ ಆಸಕ್ತಿಯಿಂದ ಈ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸುತ್ತ ಕಿಡ್ನಿ ಖಾಯಿಲೆ ಇರುವವರು ಹೇಗೆ ಉತ್ತಮ ಜೀವನ ನಡೆಸಬಹುದು ಎಂಬುದರ ಬಗ್ಗೆ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಪವರ್ ಪಾಯಿಂಟ್ ಮೂಲಕ ತಿಳಿಸಿದರು.

ಮನೋವೈದ್ಯ ಡಾ. ಶಿವಾನಂದ ಮನೋಹರ್.ಜಿ. ಮಾತನಾಡಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಮಾನಸಿಕ ಸ್ಥೈರ್ಯವನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಂಡು ದೀರ್ಘಕಾಲ ಬದುಕಬಹುದೆಂದು ತಿಳಿಸಿದರು, ಆಹಾರ ತಜ್ಞ ಸಿದ್ದರಾಜು ಮಾತನಾಡಿ ಕಿಡ್ನಿ ರೋಗಿಗಳು ಪ್ರತಿದಿನ ಯಾವ ಯಾವ ಆಹಾರವನ್ನು ತೆಗೆದುಕೊಂಡರೆ ಸಾಮಾನ್ಯರಂತೆ ಜೀವನ ಸಾಗಿಸಬಹುದೆಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ.ನರೇಂದ್ರ.ಜೆ.ಬಿ  ಮಾತನಾಡಿ ಸಂಸ್ಥೆಯು ಇದುವರೆವಿಗೂ 328 ರೋಗಿಗಳಿಗೆ ಮೇಜರ್ ಆಪರೇಷನ್ ಮಾಡಿದ್ದು, 716 ರೋಗಿಗಳಿಗೆ ಮೈನರ್ ಆಪರೇಷನ್ ಮಾಡಲಾಗಿದೆ. 17040 ಜನರಿಗೆ ಡಯಾಲಿಸಿಸ್‌ ಮಾಡಲಾಗಿದೆ, 24173 ಜನ ಹೊರರೋಗಿಗಳಾಗಿ ಮತ್ತು 1392 ಜನರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಾದ ಆರೋಗ್ಯ ಕರ್ನಾಟಕ ಮತ್ತು ಇತರೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಿರಿ ಎಂದರು. ಡಾ. ಅನಿಕೇತ್ ಪ್ರಭಾಕರ್ ಮಾತನಾಡಿ, ಡಯಾಲಿಸಿಸ್ ರೋಗಿಗಳಿಗೆ ಪೂರ್ವದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಪಡೆದುಕೊಳ್ಳಲು ಆನುಸರಿಸಬೇಕಾದ ಕ್ರಮದ ಬಗ್ಗೆ ತಿಳಿಸಿದರು. ನಂತರ ಮೈಸೂರಿನ ಇಂಟಿಮೇಟ್ ಥಿಯೇಟರ್ ಕಲಾವಿದರಿಂದ ಕಿಡ್ನಿ ಕಸಿ ಬಗ್ಗೆ ಜಾಗೃತಿ ಮೂಡಿಸುವ ಕಿರುನಾಟಕ ಪ್ರದರ್ಶಿಸಲಾಯಿತು. ಈ ವೇಳೆ ಡಾ.ಸುನೀತ, ಡಾ. ಪ್ರಕಾಶ್‌ ಪ್ರಭು, ಡಾ. ಡೇವಿಯರ್ ಡಿಸೋಜ ಉಪಸ್ಥಿತರಿದ್ದರು.

Leave a Reply

comments

Related Articles

error: