ಕರ್ನಾಟಕಪ್ರಮುಖ ಸುದ್ದಿ

ಕಾರಿನ ಮೇಲೆ ಸಲಗ ದಾಳಿ : ಹಾಸನದಲ್ಲಿ ಘಟನೆ

ರಾಜ್ಯ( ಹಾಸನ) ಮಾ.20:-ಕಾರಿನ ಮೇಲೆ ಏಕಾ ಏಕಿ ಒಂಟಿ ಸಲಗವೊಂದು  ದಾಳಿ ಮಾಡಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.

ಈ ಸಮಯದಲ್ಲಿ ಕಾರು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಹಾಸನ‌ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಂಪುಹಳ್ಳದ ಮಲೆನಾಡು ಭಾಗದಲ್ಲಿ ಮುಂದುವರಿದ ಗಜ‌ ಗಲಾಟೆಯಿಂದ‌ ಆತಂಕ ಹೆಚ್ಚಿದೆ. ಹೆದ್ದಾರಿ ಪಕ್ಕದಲ್ಲೇ ಬೀಡುಬಿಟ್ಟರುವ ಒಂಟಿ ಸಲಗ ನಿಂದ‌ ಪ್ರಯಾಣಿಕರಲ್ಲಿ‌ ಭೀತಿ ಎದುರಾಗಿದೆ. ಕಳೆದ 15 ದಿನಗಳಿಂದ ಹೆದ್ದಾರಿ ಪಕ್ಕದಲ್ಲೇ ಬೀಡುಬಿಟ್ಟಿರೋ ಒಂಟಿ ಸಲಗ ನೋಡಿ ಜನ ಭಯ ಭೀತರಾಗುತ್ತಿದ್ದಾರೆ. ಇಂದು ಚಲಿಸುತ್ತಿದ್ದ ಕಾರಿನ ಮೇಲೆ ಅದೇ ಒಂಟಿ ಸಲಗ ದಾಳಿ ಮಾಡಿದೆ. ಕಾರು ಚಾಲಕನ ಸಮಯಪ್ರಜ್ಞೆಯಿಂದ‌ ಅಪಾಯದಿಂದ ಪಾರಾಗಿದ್ದಾರೆ. ಈಗಾಗಲೆ‌ ಓರ್ವನ ನ್ನು ಬಲಿ ಪಡೆದಿರೋ ಹಂತಕ ಆನೆ ಕಾಡಿಗಟ್ಟ ಲು ಜನತೆ ಆಗ್ರಹಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: