
ಕರ್ನಾಟಕಪ್ರಮುಖ ಸುದ್ದಿ
ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್
ಬೆಂಗಳೂರು,ಮಾ.20-ಸ್ಯಾಂಡಲ್ ವುಡ್ ನ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ನಟಿ ಮಾನ್ವಿತಾ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ಚಿತ್ರದ ಮುಹೂರ್ತದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಾನ್ವಿತಾ ಅಭಿನಯಿಸುತ್ತಿರುವ ಸಿನಿಮಾಗೆ ‘ಮಲ್ಲಿ ಮೊದಲೈಂದಿ’ ಎಂದು ಹೆಸರಿಡಲಾಗಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮಾನ್ವಿತಾ ಜೊತೆ ಯಾರೆಲ್ಲ ನಟಿಸುತ್ತಾರೆ, ನಿರ್ದೇಶಕ ಯಾರು? ಎನ್ನುವ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಮುಹೂರ್ತದ ಫೋಟೋ ಹಂಚಿಕೊಂಡು ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ಸದ್ಯ ಮಾನ್ವಿತಾ ರಾಜಸ್ಥಾನ್ ಡೈರಿ ಮತ್ತು ರೈಂಬೊ ಸಿನಿಮಾ ಮುಗಿಸಿರುವ ಮಾನ್ವಿತಾ ಇದೀಗ ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ. (ಎಂ.ಎನ್)