ಮೈಸೂರು

ಮೃಗಾಲಯದ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು,ಮಾ.20 :- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮೈಸೂರಿನ ಬಿ.ಶ್ರೀನಿವಾಸ್ ಪ್ರಸಾದ್ ಅವರು ರೂ.7,500 ಪಾವತಿಸಿ ಸ್ಪಾಟೆಡ್ ಡೀರ್, ತುಮಕೂರಿನ ಪ್ರಿಸಿಶನ್ ರೂ.10,000 ಗಳನ್ನು ಪಾವತಿಸಿ ಕಾಮನ್ ಆಸ್ಟ್ರಿಚ್ ಮತ್ತು ಮೈಸೂರು ಮಾವಿನ ಮಹಿಳಾ ಸಮಾಜ ಅವರು ರೂ.5,000 ಗಳನ್ನು ಪಾವತಿಸಿ ನಾಲ್ಕು ಕೊಂಬಿನ ಜಿಂಕೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: