ಮೈಸೂರು

ರಸ್ತೆ ಅಭಿವೃದ್ದಿ & ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ನಾಗೇಂದ್ರ

ಮೈಸೂರು,ಮಾ.21:-  ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಯೋಗಿ ಇಲಾಖೆಯ ಟಿ.ಎಸ್.ಪಿ ಅನುದಾನದಲ್ಲಿ  ರಸ್ತೆ ಅಭಿವೃದ್ದಿ & ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ   ಶಾಸಕರಾದ  ಎಲ್.ನಾಗೇಂದ್ರ ಅವರು, ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-18 ರ ಸದಸ್ಯರಾದ   ಬಿ.ವಿ ರವೀಂದ್ರ ಹಾಗೂ ಹಾಗೂ 22 ಸದಸ್ಯರಾದ  ನಮ್ರತಾ ರಮೇಶ್ ಅವರ ಸಮ್ಮುಖದಲ್ಲಿ ಮಂಜುನಾಥಪುರದಲ್ಲಿ ರಸ್ತೆ & ಚರಂಡಿ ನಿರ್ಮಾಣ ಕಾಮಗಾರಿಗಾಗಿ ಒಟ್ಟ ರೂ.35.00 ಲಕ್ಷ ಹಾಗೂ ಒಂಟಿಕೊಪ್ಪಲು ಕೆ.ಇ.ಬಿ ಕಚೇರಿ ಹಿಂಬಾಗದ ರಸ್ತೆ & ಚರಂಡಿ ಅಭಿವೃದ್ದಿ ಕಾಮಗಾರಿಗಾಗಿ ರೂ.11.50 ಲಕ್ಷ ಹೀಗೆ ಒಟ್ಟು ರೂ.46.50 ಲಕ್ಷದ ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿದರು.

ಈ ಸಮಯದಲ್ಲಿ ಮಂಜುನಾಥಪುರ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಎ.ಇ.ಇ ರಾಜು, ಎ.ಇ ಹೊನ್ನೇಗೌಡ, ಮೈಸೂರು ಮಹಾನಗರಪಾಲಿಕೆ ಸದಸ್ಯರಾದ ಬಿ.ವಿ. ರವೀಂದ್ರ, ಚಾಮರಾಜ ಕ್ಷೇತ್ರದ ಭಾ.ಜ.ಪ ಅಧ್ಯಕ್ಷರಾದ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ ಪುನೀತ್ ಗೌಡ, ಉಪಾಧ್ಯಕ್ಷರಾದ ಕುಮಾರ್ ಗೌಡ, ಆಶ್ರಯ ಸಮಿತಿ ಸದಸ್ಯರಾದ ಮಹೇಶ್, ಮುಖಂಡರಾದ ಎಸ್.ಕೆ.ದಿನೇಶ್, ಷಣ್ಮುಗಂ, ದಿನೇಶ್ ಗೌಡ, ಮಂಜಣ್ಣ, ಚಿಕ್ಕವೆಂಕಟು, ಮುರುಗೇಶ್,   ಕವಿತ, ನಾಗರತ್ನ ಮುಂತಾದವರುಗಳು ಹಾಜರಿದ್ದರು.

ಪಡುವಾರಹಳ್ಳಿ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ   ನಮ್ರತಾ ರಮೇಶ್, ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಪುನೀತ್ ಗೌಡ, ರಮೇಶ್, ಮೈಸೂರು ನಗರಾಭಿವೃದ್ದಿ ಸದಸ್ಯರಾದ ಮಾದೇಶ್, ಆಶ್ರಯ ಸಮಿತಿ ಸದಸ್ಯರಾದ ಅನೂಜ್, ಮುಖಂಡರಾದ ಮಂಜಣ್ಣ, ರಮೇಶ್, ಚಿಕ್ಕವೆಂಕಟು, ಮುರುಗೇಶ್, ವಕೀಲರಾದ ಪಡುವಾರಹಳ್ಳಿ ಶಿವಕುಮಾರ್, ವೇಣುಗೋಪಾಲ್, ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಬ್ರೇಜ್  ಮುಂತಾದವರುಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: