ಕ್ರೀಡೆಪ್ರಮುಖ ಸುದ್ದಿ

ರಸ್ತೆ ಸುರಕ್ಷತಾ ವಿಶ್ವ ಟ್ವೆಂಟಿ-20 ಕ್ರಿಕೆಟ್ ಸಿರೀಸ್ ನಲ್ಲಿ ಪ್ರಶಸ್ತಿ ಗೆದ್ದ ಇಂಡಿಯಾ ಲೆಜೆಂಡ್ಸ್ ತಂಡ

ದೇಶ(ಛತ್ತೀಸ್ ಗಢ)ಮಾ.22:- ಇಂಡಿಯಾ ಲೆಜೆಂಡ್ಸ್ ತಂಡವು ರಸ್ತೆ ಸುರಕ್ಷತಾ ವಿಶ್ವ ಟ್ವೆಂಟಿ-20 ಕ್ರಿಕೆಟ್ ಸಿರೀಸ್ನಲ್ಲಿ ಯೂಸುಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಪ್ರಶಸ್ತಿ ಜಯಿಸಿತು.
ಛತ್ತೀಸಗಡದ ರಾಯಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ 14 ರನ್ಗಳಿಂದ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು ಪರಾಭವಗೊಳಿಸಿತು.
ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ಗೆ 181 ರನ್ ಗಳಿಸಿತು. ವೀರೇಂದ್ರ ಸೆಹ್ವಾಗ್ (10) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ತೆಂಡೂಲ್ಕರ್ ಐದು ಬೌಂಡರಿಗಳುಳ್ಳ 30 ರನ್ ಗಳಿಸಿದರು. ಎಸ್. ಬದ್ರಿನಾಥ್ (7) , ಯುವರಾಜ್ ಸಿಂಗ್ (60, 41 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಯೂಸುಫ್ (ಔಟಾಗದೆ 62, 36 ಎಸೆತ, 4 ಬೌಂಡರಿ, 5 ಸಿಕ್ಸರ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 85 ರನ್ಗಳನ್ನು ಕಲೆಹಾಕಿದರು.
ಗುರಿ ಬೆನ್ನತ್ತಿದ ತಿಲಕರತ್ನೆ ದಿಲ್ಶಾನ್ ಸಾರಥ್ಯದ ಶ್ರೀಲಂಕಾ ನಿಗದಿತ ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೇ ಸಾಧ್ಯವಾಯಿತು. ದಿಲ್ಶಾನ್ (21) ಹಾಗೂ ಸನತ್ ಜಯಸೂರ್ಯ (43) ಮೊದಲ ವಿಕೆಟ್ ಗೆ 62 ರನ್ಗಳನ್ನು ಸೇರಿಸಿದರು. ಚಾಮರ ಸಿಲ್ವಾ ಚಿಂಥಕ ಜಯಸಿಂಗೆ (40) ಹಾಗೂ ಕೌಶಲ್ಯ ವೀರರತ್ನೆ (38) ಉತ್ತಮ ಆಟವಾಡಿದರು.
ಯೂಸುಫ್ ಪಠಾಣ್ ಭಾರತದ ಪರ ಬೌಲಿಂಗ್ ನಲ್ಲೂ ಮಿಂಚಿ ಎರಡು ವಿಕೆಟ್ ಉರುಳಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: