ಕ್ರೀಡೆದೇಶಪ್ರಮುಖ ಸುದ್ದಿ

ಶೂಟಿಂಗ್ ವಿಶ್ವಕಪ್ ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

ದೇಶ(ನವದೆಹಲಿ)ಮಾ.22:-  ನವದೆಹಲಿಯಲ್ಲಿ ನಡೆಯುತ್ತಿರುವ  ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ / ಶಾಟ್ಗನ್ ಹಂತದಲ್ಲಿ ಆತಿಥೇಯ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಟ್ಟೂ ಎರಡು ಚಿನ್ನ, ಮಹಿಳಾ ಸ್ಕೀಟ್‌ನಲ್ಲಿ ಐತಿಹಾಸಿಕ ಕಂಚು ಸೇರಿದಂತೆ ಒಟ್ಟಾರೆ ಒಂಭತ್ತು ಪದಕಗಳೊಂದಿಗೆ ಈಗ ಚಿನ್ನ, ಬೆಳ್ಳಿ ಹಾಗೂ ಕಂಚು ತಲಾ ಮೂರು ಪದಕ ಗಳಿಸಿಕೊಂಡಿದೆ. ಭಾರತದಷ್ಟೇ ಸಂಖ್ಯೆಯ ಚಿನ್ನದೊಂದಿಗೆ ಯುಎಸ್‌ಎ ಎರಡನೇ ಸ್ಥಾನದಲ್ಲಿದೆ.

ಭಾರತ ಪುರುಷರ ಮತ್ತು ಮಹಿಳೆಯರ 10 ಎಂ ಏರ್ ಪಿಸ್ತೂಲ್ ತಂಡದ ಈವೆಂಟ್‌ ಗಳಲ್ಲಿ ಎರಡು ಬಂಗಾರದ ಪದಕ ಗಳಿಸಿಕೊಂಡಿದೆ. ಫೈನಲ್‌ ನಲ್ಲಿ ಮನು ಭಾಕರ್, ಯಶಸ್ವಿನಿ ದೇಸ್ವಾಲ್ ಮತ್ತು ಶ್ರೀನಿವೇತಾ ಮೂವರನ್ನೊಳಗೊಂಡ ತಂಡ 16-8 ಅಂತರದಿಂದ ಪೋಲೆಂಡ್ ತಂಡವನ್ನು ಮಣಿಸಿ ಅಗ್ರಸ್ಥಾನಕ್ಕೇರಿದ್ದಾರೆ.

ಪುರುಷರ 10 ಎಂ ಏರ್ ಪಿಸ್ತೂಲ್ ಫೈನಲ್‌ನಲ್ಲಿಸೌರಭ್ ಚೌಧರಿ, ಅಭಿಷೇಕ್ ವರ್ಮಾ ಮತ್ತು ಶಹಜಾರ್ ರಿಜ್ವಿ 17-11ರಿಂದ ವಿಯೆಟ್ನಾಂ ಅನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಹಿಳಾ ಸ್ಕೀಟ್‌ನಲ್ಲಿ ಐಎಸ್‌ ಎಸ್‌ ಎಫ್ ವಿಶ್ವಕಪ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಗನೇತ್ ನೆಹಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾಟ್‌ ಗನ್ ಶ್ರೇಣಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಅವರು 40 ಅಂಕದೊಡನೆ ಕಂಚು ಗೆದಿದ್ದು, ಇದಕ್ಕೂ ಮೊದಲು, ಅವರು ಅರ್ಹತಾ ವಿಭಾಗದಲ್ಲಿ 125 ರಲ್ಲಿ 117 ಅಂಕ ಗಳಿಸಿ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಮಾಡಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: