ಮೈಸೂರು

ಮಾ.24 : ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಚಿತ್ರಗೀತೆಗಳ ನಮನ-‘ಜನ ಚೈತನ್ಯ ಪುರಸ್ಕಾರ’

ಮೈಸೂರು,ಮಾ.22:- ಜನಚೈತನ್ಯ ಫೌಂಡೇಶನ್ ವತಿಯಿಂದ ಮಾ.24ರಂದು ಸಂಜೆ 4.30ಕ್ಕೆ ಜೆಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಗಾನ ಗಂಧರ್ವ, ಮರೆಯದ ಮಾಣಿಕ್ಯ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂರವರ ಸ್ಮರಣಾರ್ಥ ‘ನೂರೊಂದು ನೆನಪು ಹಾಡಾಗಿ ಬಂತು’  ಎಂಬ ಶೀರ್ಷಿಕೆಯಡಿ ಚಿತ್ರಗೀತೆಗಳ ನಮನ ಹಾಗೂ ಕಲಾವಿದರು/ಸಾಧಕರಿಗೆ ‘ಜನ ಚೈತನ್ಯ ಪುರಸ್ಕಾರ’ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಕುರಿತು ಫೌಂಡೇಶನ್ ಅಧ್ಯಕ್ಷ ಆರ್.ಲಕ್ಷ್ಮಣ್ ಮಾತನಾಡಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ  ಎನ್.ಶ್ರೀನಿವಾಸುಲು, ಪ್ರಗತಿಪರ ಚಿಂತಕರಾದ ರಂಜೀತ್ ಹೆಗಡೆ, ನಗರ ಪಾಲಿಕೆ ಸದಸ್ಯರಾದ ಶೋಭ ಸುನಿಲ್,  ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಪಿ.ಎಂ.ಸಿದ್ದರಾಜು ಮತ್ಚತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎನ್.ಲೋಕೇಶ್, ಉಮೇಶ್, ಸತ್ಯವತಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: