ಕರ್ನಾಟಕಪ್ರಮುಖ ಸುದ್ದಿ

ಜೂ.18ರಂದು ಮೈಸೂರಿನಲ್ಲಿ ಬ್ರಿಗೇಡ್ ಸಮಾವೇಶ : ಕೆ.ಎಸ್.ಈಶ್ವರಪ್ಪ

ಮೈಸೂರಿನಲ್ಲಿ ಜೂ. 18 ರಂದು ಬ್ರಿಗೇಡ್ ಸಮಾವೇಶ  ನಡೆಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಂದೊಂದು ವಿಧಾನಸಭಾ ಕ್ಷೇತ್ರದಿಂದ ಅಧ್ಯಕ್ಷ,ಉಪಾಧ್ಯಕ್ಷ,ಖಜಾಂಚಿ ಮೂವರ ನೇಮಕ ಮಾಡಲಾಗುತ್ತಿದ್ದು, ಜಿಲ್ಲಾ ಸಮಿತಿಯಿಂದಲೂ ಅಧ್ಯಕ್ಷ,ಉಪಾಧ್ಯಕ್ಷ,ಖಜಾಂಚಿಯನ್ನು ನೇಮಕ ಮಾಡಲಾಗುವುದು ಎಂದರು.

ಮೋದಿ ಹಿಂದುಳಿದ ವರ್ಗ ,ಬಡವರ ಪರ ಬಿಲ್ ತರಲು ಮುಂದಾಗಿದ್ದಾರೆ.ರಾಜ್ಯ ಸಭೆಯಲ್ಲಿಯೂ ಬಿಲ್ ಪಾಸ್ ಆಗಲಿ.ಲೋಕ ಸಭೆಯಲ್ಲಿ ಒಂದು ಅಭಿಪ್ರಾಯ ರಾಜ್ಯ ಸಭೆಯಲ್ಲಿ ಒಂದು ಅಭಿಪ್ರಾಯ ಸರಿಯಲ್ಲ.ಇದು‌ ಕಾಂಗ್ರೆಸ್ ನ ದ್ವಂದ್ವ ನೀತಿ ಆಗಲಿದೆ ಎಂದರು. ಜಾತಿ ಸಮೀಕ್ಷೆ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಮೇ ನಲ್ಲಿ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಆಂಜನೇಯ ಹೇಳಿದ್ದಾರೆ ಹೇಳಿದ ಮಾತಿನಂತೆ ಆಂಜನೇಯ ನಡೆದುಕೊಳ್ಳ ಬೇಕು ಎಂದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು 1782.44ಕೋಟಿ ರೂ. ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.ಆದರೆ 621.20 ಕೋಟಿ ರೂ.ಗಳನ್ನು ಮಾತ್ರ ರೈತರಿಗೆ ರಾಜ್ಯ ಸರ್ಕಾರ ವಿತರಿಸಿದೆ. ಮುಖ್ಯಮಂತ್ರಿಗಳು ಅಹಿಂದ ವರ್ಗದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಕೇಂದ್ರದ ಕಾಂಗ್ರೆಸ್ ಮುಖಂಡರ ಮನವೊಲಿಸಲಿ. ಖರ್ಗೆ ನೇತೃತ್ವದಲ್ಲಿ ರಾಜ್ಯಸಭೆ ಕಾಂಗ್ರೆಸ್ ಸದಸ್ಯರ ಸಭೆ ಕರೆಸಲಿ.ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಬೆಂಬಲ ಕೊಡದೇ ಇದ್ದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಒತ್ತಡ ಹಾಕಲಿ ಎಂದು ತಿಳಿಸಿದರು. (ಎಸ್.ಎಚ್)

Leave a Reply

comments

Related Articles

error: