ಮೈಸೂರು

ವ್ಯಕ್ತಿ ಕಾಣೆಯಾಗಿದ್ದಾರೆ

ಮೈಸೂರು,ಮಾ 22 :- ಮೈಸೂರಿನ ಬಾಲಾಜಿ ಅವರು ಮಾರ್ಚ್ 19 ರಂದು ಮಧ್ಯಾಹ್ನ 1.30ಗಂಟೆಯಲ್ಲಿ ಕೆಲಸವಿದೆ ಎಂದು ಹೇಳಿ ಹೋದವರು ವಾಪಸ್ಸು ಹಿಂದಿರುಗಿರುವುದಿಲ್ಲ ಎಂದು ಮೈಸೂರು ಹೆಬ್ಬಾಳ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದವರ ಚಹರೆ ಇಂತಿದೆ

ಶ್ರೀ ಬಾಲಾಜಿ, ಸುಮಾರು 29 ವರ್ಷ ಕಪ್ಪು ಮೈಬಣ್ಣದ ದೃಢಕಾರ ಶರೀರ, ದುಂಡು ಮುಖ, ಮತ್ತು ಹಳದಿ, ನೀಲಿ ಬಣ್ಣ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ತುಂಬು ತೋಳಿನ ಜರ್ಕಿನ್, ಕನ್ನಡ ಮತ್ತು ಇಂಗ್ಲೀಷ್ ಹಿಂದಿ ಮಾತಾನಾಡುತ್ತಾರೆ. ಬಲಗೈನ ರಟ್ಟೆಯಲ್ಲಿ ಸಾಲಿಟ್ಯೂಡ್ ಬ್ಲೆಸ್ ಹಾಗೂ ಬಲಗೈನ ಮುಂಗೈನಲ್ಲಿ ವಂಡರ್‍ಲಸ್ಟ್ ಎಂದು ಆಂಗ್ಲ ಭಾಷೆಯಲ್ಲಿ ಬರೆಸಿರುವ ಗುರುತುಗಳಿವೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ಹೆಬ್ಬಾಳ್ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 0821-2418318, ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 0821-2418339ಅನ್ನು ಸಂಪರ್ಕಿಸುವಂತೆ ಮೈಸೂರು ನಗರ ಹೆಬ್ಬಾಳ್ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: